ಅಪಾರ ಭಕ್ತ ಸಮುದಾಯದ ನಡುವೆ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಗುರು ನಮನ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಶ್ರೀ ರೋಜಾ ಗುರೂಜಿ ಶಿಷ್ಯ ವೃಂದವು ಆಯೋಜಿಸಿದ್ದ ಈ ಕಾರ್ಯಕ್ರಮದ ನಿಮಿತ್ತ ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನದಿಂದ 108 ಕಳಶ ಮತ್ತು ಹೂಂಬಾಳೆ ಹೊತ್ತ ಶಿವಮೊಗ್ಗದ ಹಾಗೂ ಹೊಸುಡಿ ಫಾರ್ಮ್ ನಿಂದ ಬಂದ ಮಹಿಳೆಯರ ಜೊತೆ ವಿಶೇಷ ರಾಜ ಬೀದಿ ಉತ್ಸವ ಅಂಬೇಡ್ಕರ್ ದವರೆಗೆ ನಡೆಯಿತು.


ಶ್ರೀ ರವಿಶಂಕರ ಗುರುದೇವರ ಶಿಷ್ಯ ವೃಂದದವರ ದಿವ್ಯ ಸತ್ಸಂಗದಿಂದ ಶುರುವಾದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮಿಗಳು , ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ, ಶ್ರೀ ಗುರು ಕೃಪ ರಾಜೀವ್ ಗುರುಸ್ವಾಮಿ ಚೆನ್ನೈ, ಶಬರಿಮಲೆ ಮೇಲ್ ಶಾಂತಿ ಆಪ್ತರಾದ ಶ್ರೀ ಮುರಳೀಧರನ್, ಶ್ರೀ ಶತ್ರುಗನ್ ಶಾಸ್ತ್ರಿ ಬಿಹಾರ್, ಕಡೂರು ಭದ್ರರಾಜ್ ಗುರುಸ್ವಾಮಿ, ವಿಜಯ್ ಮೇಸ್ತ್ರಿ, ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್, ಎಂಪಿ ಸಂಪತ್, ಎಂಪಿ ಗಣೇಶ್,ಮಾಜಿ ಸೂಡಾ ಅಧ್ಯಕ್ಷ ರಮೇಶ್, ಭದ್ರಾವತಿ ಕುಮಾರ್, ಡಿ ರಾಜಶೇಖರ್, ರಾಜೇಂದ್ರನ್, ಅರುಣಗಿರಿ, ಪಿಚ್ಚಾಂಡಿ, ರವಿ ಬೇಲೂರು, ಕುಮಾರ್ ಎನ್, ಜಯರಾಂ, ದೀಪಕ್ ಸಿಂಘ್, ವಿಜಯ್ ಕುಮಾರ್, ಭೂಪಾಲ್, ಸಾಸ್ವೆಹಳ್ಳಿ, ಲಿಂಗಾಪುರ, ದ್ಯಾವಂಕೆರೆ, ರೆಟ್ಟೆಹಳ್ಳಿ, ಶಿಕಾರಿಪುರ, ಹೊಸುಡಿ ಫಾರ್ಮ್, ಭದ್ರಾವತಿ ಚೆನ್ನೈ, ಬೆಂಗಳೂರು ಹಾಗೂ ಹಲವು ಪ್ರದೇಶಗಳಿಂದ ಬಂದ ಗುರುಸ್ವಾಮಿಗಳು ಹಾಗೂ ಗೂರುಗಳ ಶಿಷ್ಯರು ಉಪಸ್ಥಿತರಿದ್ದರು.
ವಿಜಯ್ ಮೇಸ್ತ್ರಿ ಹಾಗೂ ಕುಮಾರ್ ರವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಹಾಗೂ ಗುರೂಜಿ ರವರ ಶಿಷ್ಯರು ಶ್ರೀ ಶಬರೀಶ್ ರೋಜಾ ಷಣ್ಮುಗಂ ಗುರುಸ್ವಾಮಿ ಅವರಿಗೆ ಅವರ ಹುಟ್ಟು ಹಬ್ಬದ ಶುಭಾಶಯ ಕೋರಿ ಸನ್ಮಾನಿಸಿದರು.

ಹರಿದ್ವಾರದ ದಿಂದ ತಂದ ವಿಶೇಷ ಗಂಗಾಜಲವನ್ನು ಎಲ್ಲರಿಗೂ ವಿತರಿಸಲಾಯಿತು. ಭೋಜನ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಶ್ರೀ ಶಬರೀಶ್ ಗುರುಸ್ವಾಮಿ ಯವರು ಎಲ್ಲಾ ಭಕ್ತಾದಿಳಿಗೆ ಮುಂಬರುವ ಸೊಸೈಟಿ, NGO, ಯೋಜನೆಗಳು, ಸೇವೆಯನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸುಬ್ರಮಣ್ಯ ಪ್ರತಿಮೆ ಮಾಡುವುದರ ಕುರಿತು ಮಾತನಾಡಿ ಐಟಿ ಕಡೆಯಿಂದ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ತಿಳಿಸಿದರು.


ಆದ್ಯ ಹಾಗೂ ಗಿರೀಶ್ ರವರ ಪ್ರಾರ್ಥನೆ, ಖುಷಿ ರವರ ನೃತ್ಯ, ಬೆಂಗಳೂರಿನಿಂದ ಬಂದ ಮುತ್ತು ಮಾರಿಯಮ್ಮನ್ ಪಂಬೆ ಇಸೈಕುರು ಇವರಿಂದ ಅಯ್ಯಪ್ಪ ಮಹಿಮೆ ಕಾರ್ಯಕ್ರಮವು ಎಲ್ಲರ ಮನವನ್ನು ಸೆಳೆಯಿತು.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದ ಹಾಗೂ ಶ್ರೀ ಶಬರೀಶ್ ಗುರುಸ್ವಾಮಿ ಶಿಷ್ಟ ವೃಂದದ ಕುಮಾರ್ N, ಶಂಕರ್ S, ಮಣಿಕಂಠ, ರಾಜ್ ಕುಮಾರ್, ಮುರುಗೇಶ್, ವಿಜಯಕುಮಾರ್ (ಧನಿ), ದೀಪಕ್ ಸಿಂಗ್, ಸೆಲ್ವರಾಜ್, ಉದಯ್ ಕುಮಾರ್, ಸುಬ್ಬು, ಶಾಂತರಾಜ್, ಮನೋಹರ್, ಶ್ಯಾಮ್, ಕಲ್ಯಾಣಿ, ಪ್ರತಿಮಾ, ಸಿಂಧು, ವಾಣಿ, ಜ್ಯೋತಿ, ಸ್ವಪ್ನ, ಭುವನ, ಚಿತ್ರ, ಜಯಶ್ರೀ, ಗೀತಾಂಜಲಿ, ಮಂಜುಳ, ನಿಖಿಲ್, ವೀರೇಶ್, ಮುರಳಿ, ಕಿರಣ್, ಶರತ್ ಧನ್ಯವಾದ ಅರ್ಪಿಸಿದರು.

ವರದಿ ಪ್ರಜಾ ಶಕ್ತಿ