ಸಿ ಕೃಷ್ಣಪ್ಪಎನ್ಈ ಎಸ್ ವಿದ್ಯಾ ಸಂಸ್ಥೆ (ರಿ.) ಶಿಕ್ಷಕರಾಗಿ, ಮುಖ್ಯ ಶಿಕ್ಷಕರ ರಾಗಿ ಪ್ರಾಂಶುಪಾಲರಾಗಿ ಉಪ ಪ್ರಾಂಶುಪಾಲರಾಗಿ ಕುಂಸಿ ಬೆಳಗುತ್ತಿ ಹುಂಚ ಶಿವಮೊಗ್ಗ ನಗರದ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶ್ರೀಯುತರು ನಿವೃತ್ತಿ ನಂತರ ವಿರಾಮ ಜೀವನ ನಡೆಸುತ್ತಿದ್ದರು,, ತಮ್ಮ ವಿರಾಮ ಸಮಯದಲ್ಲಿಯೇ ಸಮಾಜ ಸೇವೆ ಸಂಘಟನೆಗಳಲ್ಲಿ ಬಹು ಮುಖ್ಯವಾಗಿ ಕಾಣಿಸಿಕೊಂಡಿದ್ದು ಮಾಜನ್ ಜಾಗೃತ್ ಸಮಿತಿ (ರಿ.) ಸಂಸ್ಥಾಪಕ ಉಪಾಧ್ಯಕ್ಷರಾಗಿ ತಮ್ಮ ಅಮೂಲ್ಯ ಸಮಯವನ್ನು ಸಮಾಜ ಕಟ್ಟುವಲ್ಲಿ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದರು.

ವೈಯುಕ್ತಕವಾಗಿ ಅತ್ಯುತ್ತಮ ಯೋಗ ಪಟು ವಾಗಿದ್ದ ಇವರು ತಮ್ಮ ಸೇವಾ ಅವಧಿಯಲ್ಲಿ ತಾವು ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಕಲಿಸುವ ಮೂಲಕ ವಿಶೇಷ ಗಮನ ಸೆಳೆದಿದ್ದರು. ಅತ್ಯುತ್ತಮ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇವರು ಜೊತೆಗೆ ಎಲ್ ಎಲ್ ಬಿ ಪದವಿಕೂಡ ಪಡೆದಿದ್ದರು. ತಮ್ಮೆಲ್ಲ ಸೇವಾ ಅವಧಿಯನ್ನು ಬಹುಮಟ್ಟಿಗೆ ಹಳ್ಳಿಗಾಡಿನ ಪ್ರದೆಶಗಳಲ್ಲಿ ಕಳೆದಿದ್ದು ಅನೇಕ ಬಡ ವಿದ್ಯಾರ್ಥಿಗಳಿಗೂ ಕೂಡ ಆರ್ಥಿಕವಾಗಿ ಸಹಾಯ ಮಾಡಿದ್ದರು. ತಮ್ಮ ಸಂಪೂರ್ಣ ಸೇವಾ ವಲಯದಲ್ಲಿ ಒಂದೇ ಒಂದು ಕಳoಕ ರಹಿತರಾಗಿ ಸೇವೆ ಸಲ್ಲಿಸಿದ ಶ್ರೀಯುತರು ಹಲವು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು,ಇಂದು ಮುಂಜಾನೆ ಮೂರರ ಸಮಯದಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದರು.

ಮೃತರು ಪತ್ನಿ ಎರಡು ಗಂಡು ಒಂದು ಹೆಣ್ಣು ಮಕ್ಕಳು ಸೇರಿದಂತೆ ಸಮುದಾಯದ ಅಪಾರ ಸಂಬಂಧಿಕರನ್ನು ಬಿಟ್ಟು ಅಗಲಿದ್ದಾರೆ. ಶ್ರೀ ಕೃಷ್ಣಪ್ಪನವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯ ಸಮಿತಿ ಮಾಜನ್ ಜಾಗೃತ್ ಸಮಿತಿ(ರಿ.) ಶೋಕ ವ್ಯಕ್ತಪಡಿಸಿದ್ದಾರೆ.

ಮೃತರ ಪಾರ್ಥಿವ ಶರೀರ ಸ್ವಗೃಹ ಸಿದ್ದೇಶ್ವರ ನಗರ ದಲ್ಲೀ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದು,, ಬೆಳಗ್ಗೆ 11 ಗಂಟೆಯ ನಂತರ ಸ್ವಗ್ರಾಮ ತುಮಕೂರು ಜಿಲ್ಲೆ ಮಧುಗಿರಿ ಕಲಿದೇವಪುರಕ್ಕೆ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.