ಕಾನೂನು ಸುವ್ಯವಸ್ಥೆಯ ಹಿತ ದೃಷ್ಠಿಯಿಂದ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ, ಶ್ರೀ ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ, ಶ್ರೀ ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಬಿ ಉಪ ವಿಭಾಗ ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡದೊಂದಿಗೆ ಶಿವಮೊಗ್ಗ ನಗರದ ಎಎ ವೃತ್ತ, ಓಟಿ ರಸ್ತೆ, ವಿಜಯ ಗ್ಯಾರೇಜ್ ಮತ್ತು ಟೆಂಪೂ ಸ್ಟ್ಯಾಂಡ್ ನಲ್ಲಿ ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ನ್ನು ನಡೆಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕರು, ಅಂಗಡಿ ಮಾಲೀಕರೊಂದಿಗೆ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಯಾರಾದರು ಸಾರ್ವಜನಿಕವಾಗಿ ಉಪಟಳ (Public Nuisance) ನೀಡುವುದು, ಚುಡಾಯಿಸುವುದು, ತ್ರಿಬ್ಬಲ್ ರೈಡಿಂಗ್ ಮತ್ತು ಅವ್ಯವಸ್ಥಿತ ಪಾರ್ಕಿಂಗ್ ಮಾಡಿ ತೊಂದರೆ ನೀಡುತ್ತಿರುವ ಬಗ್ಗೆ ವಿಚಾರಿಸಿ, ಒಂದು ವೇಳೆ ಈ ರೀತಿ ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ / 112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದರು.

2) ಅಂಗಡಿಗಳಲ್ಲಿ ಸಿಸಿ ಟಿವಿ ಹಾಕಿಸಿರುವ ಬಗ್ಗೆ ಪರಿಶೀಲಿಸಿ, ಅಂಗಡಿಗಳ ಮಾಲೀಕರು ತಮ್ಮ ಸುರಕ್ಷತೆಯ ಹಿತದೃಷ್ಠಿಯಿಂದ ಕಡ್ಡಾಯವಾಗಿ ಸಿಸಿ ಟಿವಿಗಳನ್ನು ಅಳವಡಿಸಿಕೊಳ್ಳುಲು ಹೇಳಿದರು.

3) ಆಟೋ ಸ್ಟ್ಯಾಂಡ್ ನಲ್ಲಿನ ಆಟೋಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡವನ್ನು ಪಾವತಿಸಲು ಬಾಕಿ ಇದ್ದ ಆಟೋವು ಪತ್ತೆಯಾಗಿದ್ದು, ಸದರಿ ಆಟೋ ಚಾಲಕನಿಂದ ಬಾಕಿ ಉಳಿಸಿಕೊಂಡಿರುವ ದಂಡದ ಮೊತ್ತವನ್ನು ಕಟ್ಟಿಸಿಕೊಳ್ಳುಕೊಳ್ಳುವಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು

4) ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ಬೈಕ್ಗಳ ಸೈಲೆನ್ಸರ್ ಗಳನ್ನು ಪರಿಶೀಲಿಸಿ, ಕರ್ಕಷ ಶಬ್ದವನ್ನುಂಟು ಮಾಡುವ ಸೈಲೆನ್ಸರ್ ಅನ್ನು ಅಳವಡಿಕೆ ಮಾಡುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು ಎಂದು ಗ್ಯಾರೇಜ್ ನವರಿಗೆ ಎಚ್ಚರಿಕೆ ನೀಡಿದರು.

ವರದಿ ಪ್ರಜಾ ಶಕ್ತಿ