ರಾಜ್ಯಕ್ಕೆ ನೀಡಬೇಕಾದ 187000 ಕೋಟಿ ತೆರಿಗೆ ಹಣವನ್ನು ನೀಡದೇ ಇರುವ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರ ಮನೆಗೆ NSUI ವತಿಯಿಂದ ಮುತ್ತಿಗೆ ಕಾರ್ಯಕರ್ತರ ಬಂಧನ.

ಕರ್ನಾಟಕದ ಮೇಲೆ ಆರ್ಥಿಕ ದೌರ್ಜನ್ಯ ಎಸಗಿರುವ ರಾಜ್ಯಕ್ಕೆ ಕೇಂದ್ರದಿAದ ಬರಬೇಕಾದ ೧ ಲಕ್ಷದ ೮೭ ಸಾವಿರ ಕೋಟಿ ತೆರಿಗೆ ಹಣ ಕೊಡಲು ಆಗ್ರಹ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೊದಲಿನಿಂದಲೂ ಮಲತಾಯಿಧೋರಣೆ ತೋರುತ್ತಿದ್ದು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಆರ್ಥಿಕ ದೌರ್ಜನ್ಯ ಎಸಗುತ್ತಿದ್ದು, ಇದನ್ನು ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ. ಕೇAದ್ರ ಸರ್ಕಾರ ರಾಜ್ಯಕ್ಕೆ ೨೦೧೭-೧೮ರಿಂದ ಜಿ.ಎಸ್.ಟಿ. ತೆರಿಗೆ ಹಣ ಕೊಡದೇ ದೌರ್ಜನ್ಯ ಎಸಗುತ್ತಿದೆ. ಈ ವರೆಗೂ ರಾಜ್ಯಕ್ಕೆ ೧ ಲಕ್ಷದ ೮೭ ಸಾವಿರ ಕೋಟಿ ಜಿ.ಎಸ್.ಟಿ. ತೆರಿಗೆ ಹಣ ಕೊಡಬೇಕಿದ್ದು, ಇದನ್ನು ಕೊಟ್ಟಿರುವುದಿಲ್ಲ.

ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ೧೮,೧೭೭ ಕೋಟಿ ರೂ. ಬೇಡಿಕೆ ಸಲ್ಲಿಸಿದ್ದರೂ ಈ ವರೆಗೂ ಬಿಡಿಗಾಸು ಸಹ ನೀಡಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ.೪.೭೭ರಿಂದ ಶೇ. ೩.೬೪ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ೬೨,೦೯೮ ಕೋಟಿ ನಷ್ಟವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ ೨೦೨೩-೨೪ನೇ ಸಾಲಿನಲ್ಲಿ ಘೋಷಿಸಿದ್ದು, ಯೋಜನೆಗೆ ೫,೩೦೦ ಕೋಟಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಒಂದು ರೂಪಾಯಿಯ ಅನುದಾವನ್ನೂ ನೀಡಿರುವುದಿಲ್ಲ.

೧೫ನೇ ಹಣಕಾಸು ಆಯೋಗವು ರಾಜ್ಯಕ್ಕೆ ೫,೪೯೫ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿದ್ದರೂ ಈ ವರೆಗೂ ಬಿಡಿಗಾಸು ಸಹ ಕೊಟ್ಟಿರುವುದಿಲ್ಲ. ಸಹಭಾಗಿತ್ವ ಯೋಜನೆಗೆ ೨೦೨೧-೨೧ನೇ ಸಾಲಿನಲ್ಲಿ ೨೦ ಸಾವಿರ ಕೋಟಿ ಇದ್ದದ್ದನ್ನು ೨೦೨೨-೨೩ನೇ ಸಾಲಿನಲ್ಲಿ ೧೩ ಸಾವಿರ ಕೋಟಿ ರೂ.ಗಳಿಗೆ ಕಡಿತಗೊಳಿಸಿದೆ. ಏಮ್ಸ್ ಮಹದಾಯಿ ಯೋಜನೆಗೆ ಮನ್ನಣೆ ನೀಡದೇ ಕನಸಾಗೇ ಉಳಿಯುವಂತೆ ಮಾಡಿದೆ. ಇದೆಲ್ಲವೂ ಕೇಂದ್ರ ಸರ್ಕಾರ ಕನ್ನಡಿಗರಿಗೆ ಕರ್ನಾಟಕಕ್ಕೆ ಎಸಗುತ್ತಿರುವ ಅರ್ಥಿಕ ದೌರ್ಜನ್ಯವಾಗಿದ್ದು, ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಹಣವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ತನ್ನ ನೀತಿ ಬದಲಾಯಿಸಬೇಕು. ರಾಜ್ಯಕ್ಕೆ ಬರಬೇಕಾದ ೧ ಲಕ್ಷದ ೮೭ ಸಾವಿರ ಕೋಟಿ ತೆರಿಗೆ ಹಣವನ್ನು ಕೂಡಲೇ ನೀಡಬೇಕು. ಇಲ್ಲವಾದಲ್ಲಿ ಇಂದು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ನ 33 ಹೆಚ್ಚು ಕಾರ್ಯಕರ್ತರನ್ನ ಬಂದಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಹೋಗ್ತಾರರಾದಾ ಬಿಎ ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷ, ನೂರುಲ್ಲಾ, ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂದನ್, ಶಿವು ನೂಡೂರು,ಅಕ್ಬರ್, ಗಿರೀಶ್ NSUI ನ ಜಿಲ್ಲಾಧ್ಯಕ್ಷ ವಿಜಯ್, ರವಿ ಕಾಟಿಕೆರೆ, ಹರ್ಷಿತ್ ಗೌಡ, ಧನರಾಜ್, ಗೌತಮ್, ರವಿ, ಚಂದ್ರ ಜಿ ರಾವ್, ಟ್ರೋಫಿಕ್, ಅಬ್ದುಲ್, ವರುಣ್ V ಪಂಡಿತ್, ಉಲ್ಲಾಸ್ ದೀಪು ಸಾಗರ್ ಸೃಜನ ಸಾಗರ ತೇಜು.

ವರದಿ ಪ್ರಜಾ ಶಕ್ತಿ