ಶಿವಮೊಗ್ಗ ಬಂಟರ ಭವನ

ಶಿವಮೊಗ್ಗ ನಗರದ ಬಂಟರ ಯಾನೆ ನಾಡವರ ಸಂಘದಿಂದ ಗೋಪಾಲಗೌಡ ಬಡಾವಣೆಯ ನೂರಡಿ ರಸ್ತೆಯಲ್ಲಿ ಸುಮಾರು 10 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಿವಮೊಗ್ಗ ಬಂಟರ ಭವನದ ಉದ್ಘಟನಾ ಸಮಾರಂಭವು ಫೆ. 10ರ ಶನಿವಾರ ಸಂಜೆ ೪ಕ್ಕೆ ನಡೆಯಲಿದೆ.

ಕಳೆದ 2006ರಲ್ಲಿ ಬಂಟರ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಈಗ ಸಂಪೂರ್ಣಗೊಂಡು ಉದ್ಘಾಟನೆಗೆ ಸಜಗಿದೆ ಎಂದು ಸಂಘದ ಅಧ್ಯಕ್ಷ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಸುಮಾರು 25 ಸಾವಿರ ಚ.ಡಿ. ಸಿ.ಎ. ಜಗದಲ್ಲಿ ಭವನ ನಿರ್ಮಿಸಿದ್ದು, 800 ಆಸನವುಳ್ಳ ಸಂಪೂರ್ಣ ಹವಾ ನಿಯಂತ್ರಿತ ಸಭಾಂಗಣವಿದ್ದು, 12 ಕೋಠಡಿಗಳಿವೆ. 400 ಜನ ಕುಳಿತು ಊಟ ಮಾಡುವ ಭೋಜನಾಲಯವಿದೆ. ಲೋಕಸಭಾ ಸದಸ್ಯರು ಸೇರಿದಂತೆ ಸ್ಥಳೀಯ ಶಾಸಕರಿಂದ 4.50 ಕೋಟಿ. ರೂ. ಅನುದಾನ ಬಂದಿದ್ದು, ಉಳಿದ ಹಣವನ್ನು ಸಮಾಜದ ಮುಖಂಡರು ಭರಿಸಿದ್ದಾರೆ. ಬೆಂಗಳೂರಿನ ಎಂ.ಆರ್.ಜಿ. ಗ್ರೂಫ್‌ನ ಕೆ. ಪ್ರಕಾಶ್‌ಶೆಟ್ಟಿ 50 ಲಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದರು.

ಸಭಾ ಭವನವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಭೋಜನಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಭಾ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ, ದಾನಿಗಳ ಪೋಟೋ ಗ್ಯಾಲರಿಯನ್ನು ಬೆಂಗಳೂರಿನ ಎಂ.ಆರ್.ಜಿ. ಗ್ರೂಫ್‌ನ ಕೆ.ಪ್ರಕಾಶ್‌ಶೆಟ್ಟಿ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆಡಳಿತ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದರು.

ಅತಿಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚೆನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜಶೆಟ್ಟಿ ಗಂಟಿಹೊಳೆ, ಹರೀಶ್ ಪೂಂಜ, ಅಶೋಕ್ ರೈ, ಭಾರತಿ ಶೆಟ್ಟಿ, ಮುಂಬೈನ ಕೈಗಾರಿಕೋದ್ಯಮಿ ಮಂಡಗದ್ದೆ ಅಡ್ಡಮನೆ ಪ್ರಕಾಶ್‌ಶೆಟ್ಟಿ, ಚಿಕ್ಕಮಗಳೂರಿನ ಲೈಪ್‌ಲೈನ್ ಫೀಡ್ಸ್ ಪ್ರೈ.ಲಿ., ಚೇರ್‌ಮ್ಯಾನ್ ಕಿಶೋರ್‌ಕುಮಾರ್ ಹೆಗಡೆ ಸೇರಿದಂತೆ ಸಂಘದ ಮಹಾಪೋಷಕರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಎಂ.ಕೆ. ಸುರೇಶ್‌ಕುಮಾರ್, ಪ್ರಮುಖರಾದ ಡಾ. ವೈ.ವಿ.ಶೆಟ್ಟಿ, ಸುರೇಶ್ ಶೆಟ್ಟಿ, ದಿವಾಕರ್ ಶೆಟ್ಟಿ, ರಾಜೀವ್ ಶೆಟ್ಟಿ ಮಹೇಶ್ ಡಿ.ಶೆಟ್ಟಿ, ಜಿ. ಸುರೇಶ್‌ಕುಮಾರ್ ಶೆಟ್ಟಿ, ಕುಶಾಲ್ ಶೆಟ್ಟಿ ,ಪುಷ್ಪ ಎಸ್.ಶೆಟ್ಟಿ ಇನ್ನಿತರರಿದ್ದರು.

ವರದಿ ಪ್ರಜಾ ಶಕ್ತಿ