ಭಾರತ್ ಅಕ್ಕಿಗೆ ಚಾಲನೆ…
ದೇಶದ ಜನ ಸಾಮಾನ್ಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಗುಣಮಟ್ಟದ ಅಕ್ಕಿ ವಿತರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಐತಿಹಾಸಿಕ ಮಹತ್ವಾಕಾಂಕ್ಷೆ ಯೋಜನೆಯಾದ “ಭಾರತ್ ಅಕ್ಕಿ” ಯೋಜನೆಗೆ ಶಿವಮೊಗ್ಗದ ವಿನೋಬನಗರ ಶಿವಾಲಯ ದೇವಸ್ಥಾನ ಆವರಣದಲ್ಲಿ ಶ್ರೀ ಉಜ್ಜಯಿನಿ ಸದ್ದರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪಾದ ಮಹಾಸ್ವಾಮೀಜಿ ಸಮ್ಮುಖದಲ್ಲಿ ಶ್ರೀಗಳ ಅಕ್ಕಿ ವಿತರಣೆಗೆ ವಿದ್ಯುಕ್ತ ಚಾಲನೆ ನೀಡಿದರು.
ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಈ ಒಂದು ಐತಿಹಾಸಿಕ ಮಹತ್ವಾಕಾಂಕ್ಷೆ ಯೋಜನೆಗೆ ಪ್ರಧಾನಿಗಳು ಚಾಲನೆ ನೀಡಿ, ಈ ಯೋಜನೆಡಿ 5kg ಮತ್ತು 10kg ಅಕ್ಕಿಯ ಮೂಟೆ ಪ್ರತಿ ಕಿಲೋ ಗ್ರಾಂಗೆ ರೂ. 29 ರಂತೆ ಶ್ರೀ ಸಾಮಾನ್ಯನಿಗೆ ಲಭಿಸಲಿದ್ದು, ಸಮಸ್ತ ಲೋಕಸಭಾ ಕ್ಷೇತ್ರದ ಮತದಾರ ಬಾಂಧವರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ವಿವಿಧ ಮಠಗಳ ಪೂಜ್ಯ ಮಠಾಧೀಶರುಗಳು, ಹಿರಿಯರಾದ ಶ್ರೀ ಈಶ್ವರಪ್ಪ, ಶಾಸಕರಾದ ಶ್ರೀ ಚನ್ನಬಸಪ್ಪ , ಶ್ರೀ ರುದ್ರೇಗೌಡ , ಮುಖಂಡರಾದ ಶ್ರೀ ಜ್ಯೋತಿಪ್ರಕಾಶ್ , ಶ್ರೀ ಧನಂಜಯ ಸರ್ಜಿ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಮಾಜದ ಹಿರಿಯರು ಜೊತೆಗಿದ್ದರು.