ಮೈಸೂರು ಮತ್ತು ಕೆ ಆರ್ ನಗರ ತಾಲ್ಲೂಕು ಹಾಗು ಜಿಲ್ಲಾ ಪಂಚಾಯತ್ ಗಳಲ್ಲಿ 2023-24 ರ ತುಂಡುಗುತ್ತಿಗೆ ಕಾಮಗಾರಿಗಳ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಬೇಕು
ಅರ್ಜಿ ಸಲ್ಲಿಸಿದ ಗುತ್ತಿಗೆದಾರನಿಗೆ ತುಂಡುಗುತ್ತಿಗೆ ಕಾಮಗಾರಿ ನೀಡದೆ ಅರ್ಜಿಯ ಇಲ್ಲದ ಗುತ್ತಿಗೆದಾರರಿಗೆ ಹೆಚ್ಚಿನ ಕಾಮಗಾರಿಯನ್ನು ನೀಡುತ್ತಿರುವುದು
ಅರ್ಜಿಯನ್ನು ನೀಡಿದ ಕೂಡಲೇ ಸರ್ಕಾರದ ನಿಯಮ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ತುಂಡುಗುತ್ತಿಗೆ ಪ್ರಸ್ತಾವನೆಗೆ ಶಿಫಾರಸು ಮಾಡಬೇಕು
ಇಲ್ಲಿ ಅಧಿಕಾರಿಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕೆಲವು ರಾಜಕಾರಣಿಗಳ ಚೇಳಗಳಿಗೆ ಯಾವುದೇ ನಿಯಮಗಳಿಲ್ಲದೆ ತುಂಡುಗುತ್ತಿಗೆಯನ್ನು ನೀಡುತ್ತಿದ್ದಾರೆ
ಕಚೇರಿ ಆವರಣದಲ್ಲಿದ್ದ ಚೀಪು ಮತ್ತು ಟೆಂಪೋಗಳನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಹರಾಜು ಪ್ರಕಟಣೆ ನೀಡದೆ ಏಕೈಕ ರಥ ದಿನದಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ
ಕ್ರಿಯಾ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ ಎರಡು ವರ್ಗಗಳ ಇಲಾಖೆ ಪ್ರತ್ಯೇಕವಾಗಿದ್ದರು ಸಹ ಎರಡು ವರ್ಷಗಳ ಅನುದಾನವನ್ನು ಒಟ್ಟಿಗೆ ಮೀಸಲು ಇರಿಸುವುದರಿಂದ ಒಂದು ವರ್ಗಕ್ಕೆ ಅನ್ಯಾಯವೆಸಗುವಂತಾಗಿದೆ
ಹಲವು ಬೇಡಿಕೆಗಳನ್ನು ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯ ಮುಂದೆ ಕರ್ನಾಟಕ ವೀರ ಕೇಸರಿ ಪಡೆಯು ಪ್ರತಿಭಟನೆ ಮೂಲಕ ಮನವಿ ಮಾಡಲಾಯಿತು
ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯ ಮುಂದೆ ಪ್ರತಿಭಟನೆಯಲ್ಲಿ ಮಧುವನ ಚಂದ್ರು. ಎಂ ಕುಮಾರ. ಮಹದೇವು. ಹಾಗೂ ಹಲವರು ಉಪಸಿತರಿದ್ದರು
ವರದಿ ಸಂತೋಷ್ ರಾಮ್