ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದ ವಾಸದ ಮನೆಯಲ್ಲಿ
ಕಳ್ಳತನ ಮಾಡಿ ನಂತರ ಮನೆಯಲ್ಲಿನ ಹಾಸಿಗೆಗೆ ಬೆಂಕಿ ಹಾಕಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ನಂ. 44/2024 ಕಲಂ 454, 457, 380, 436 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ. ಅನಿಲ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ. ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ. ಬಾಬು ಆಂಜನಪ್ಪ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪ ವಿಬಾಗರ ವರ ಮೇಲ್ವಿಚಾರಣೆಯಲ್ಲಿ, ಶ್ರೀ. ಗುರುಬಸವರಾಜ ಹೆಚ್, ಪಿಐ ಕೋಟೆ ಪೊಲೀಸ್ ಠಾಣೆ ರವರ ನೇತೃತ್ವದ ಶಿವಕುಮಾರ್ ಡಿ, ಪಿಎಸ್ಐ, ಕೂಡಲ,ಪಿಎಸ್ಐ ಎಎಸ್ಐ ಶ್ರೀಹರ್ಷ, ಎ.ಎಸ್.ಐ ಅಮೃತಬಾಯಿ, ಹಾಗೂ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಸಿಪಿಸಿ ಗೊರವರ ಅಂಜಿನಪ್ಪ, ಕಿಶೋರ, ಜಯಶ್ರೀ ರವರನ್ನು ಒಳಗೊಂಡ ತನೀಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕಃ 20-03-2024 ರಂದು ಪ್ರಕರಣದ ಆರೋಪಿತರಾದ 1) ಆನಂದ.ಎ, 23 ವರ್ಷ ಶಿವಮೊಗ್ಗ, ಮತ್ತು 2) ಸಂಗೀತಾ.ಸಿ.ಎಸ್, 32 ವರ್ಷ, ಅಶೋಕ ರಸ್ತೆ. ಗಾಂಧಿಬಜಾರ್, ಶಿವಮೊಗ್ಗ, ರವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ 1,75,500/-ನಗದು ಹಣ, ಅಂದಾಜು ಮೌಲ್ಯ 1,49,450/- ರೂಗಳ ಒಟ್ಟು 2 ಕೆಜಿ 135 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಅಂದಾಜು ಮೌಲ್ಯ 1,26,000/- ರೂಗಳ ಒಟ್ಟು 19 ಗ್ರಾಂ ಬಂಗಾರದ ಒಡವೆಗಳು, ಅಂದಾಜು ಮೌಲ್ಯ 10,000/- ರೂಗಳ ಪ್ಲಂಬಿಂಗ್ ವಸ್ತುಗಳು ಮತ್ತು ಅಂದಾಜು ಮೌಲ್ಯ 1,15,000/- ರೂಗಳ ಕೃತ್ಯಕ್ಕೆ ಉಪಯೋಗಿಸಿದ 02 ಬೈಕ್ ಗಳು, ಅಂದಾಜು ಮೌಲ್ಯ 93,000/- ರೂಗಳ 02 ಮೊಬೈಲ್ ಗಳು ಸೇರಿ ಒಟ್ಟು 6,59,950/- ರೂ ಮೌಲ್ಯದ ವಸ್ತುಗಳನ್ನು* ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದಿಸಿ ಪ್ರಶಂಸಿಸಿರುತ್ತಾರೆ.