ಶಿವಮೊಗ್ಗ ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ನಗರ ಮತ್ತು ಗ್ರಾಮಾಂತರ ಮಟ್ಟದ ಬೂತ್ ಕಾರ್ಯಕರ್ತರ ಸಮಾವೇಶವನ್ನ ನಡೆಯಿತು.

ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನ ಸೇರಿಸಲು ನಡೆದ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮ ಮುಗಿಸಿ ನೀವು ಮನೆಗೆ ಹೋದ ಕೂಡಲೆ ನಿಮ್ಮ ಮೊಬೈಲ್ ಗೆ ಕರೆ ಬರಲಿದೆ. ಹಾಗಾದರೆ ನೀವು ಮೋದಿ ಕಟ್ಟಾಳು ಅಲ್ವಾ ಎಂದು ಭಾವನಾತ್ಮಕವಾಗಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರೂ ನಮ್ಮೊಂದಿಗೆ ಓಡಾಡುತ್ತಿದ್ದರು. ಅವರಿಗೂ ಕರೆ ಬಂದಿದೆ. ಇದು ಆಶ್ಚರ್ಯವೆನಿಸುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು 108 ಸ್ಥಾನ ಗಳಿಸಲಾಯಿತು ಬೊಮ್ಮಾಯಿ, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಸಿಎಂ ಆದರು. ಆದರೆ 108 ನಿಂದ 66 ಸ್ಥಾನಕ್ಕೆ ಕುಸಿದಿದ್ದು ಕಾರ್ಯಕರ್ತರಿಂದ ಅಲ್ಲ ಎಂದು ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಗೆದ್ದು ನಿಮ್ಮ ಋಣ ತೀರಿಸುವೆ. ಯಾವುದೇ ಕಾರಣಕ್ಕೆ ಹೆದರ ಬೇಡಿ, ಈಗ ತಾನೇ ನನ್ನ ಮಗನಿಗೆ ಮೊಬೈಲ್ ಗೆ ಕರೆ ಬಂದಿದೆ. ವಿಷಯನ್ನ ಆಮೇಲೆ ತಿಳಿಸುವುದಾಗಿ ವೇದಿಕೆ ಮೇಲೆ ಮಾತನಾಡಿದ ಈಶ್ವರಪ್ಪ, ಯಾರ ಕರೆ ಬಙದರೂ, ಮನೆಗೆ ಬಂದರು ಪಕ್ಷೇತರವಾಗಿ ನಾನು ಲೋಕಸಭಾ ಚುನಾವಣೆ ಸ್ಪರ್ಧಿಸುವುದಾಗಿ ಘೋಷಿಸಿದರು.

ಶಿಕಾರಿಪುರದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಗಿಡ್ಡಪ್ಪ ದೇವಸ್ಥಾನದಲ್ಲಿ ಬೆಂಬಲಿಗರು ಬೆಂಬಲ ಸೂಚಿಸಿ ಅಪ್ಪಮಕ್ಕಳ ಮೋಸದಿಂದ ಬೇಸತ್ತಿರುವುದು ಕಂಡು ಬರುತ್ತಿದೆ. ಹೋದಕಡೆಯೆಲ್ಲಾ ನಿಮ್ಮನ್ನ ಗೆಲ್ಲಿಸುವುದಾಗಿ ಹೇಳ್ತಿದ್ದಾರೆ, ಬ್ರಾಹ್ಮಣ ಈಡಿಗ, ಲಂಬಾಣಿ ಮೊದಲಾದವರು ಈಶ್ವರಪ್ಪನವರು ನನಗೆ ಗೆಲ್ಲಿಸುವುದಾಗಿ ಹೇಳ್ತಿದ್ದಾರೆ.

ಯಾರಿಗಾದರೂ ಹಣಕೊಟ್ಟು ಸಭೆಗೆ ಕರೆದಿಲ್ಲ. ಬೂತ್ ಗಳಲ್ಲಿ ನೀವೇ ಬೂತ್ ನಾಯಕರು. ಬೂತ್ ನಲ್ಲಿ ಮಹಿಳೆಯರೊಂದಿಗೆ ಮನೆಗೆ ಹೋಗಿ ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಗೆ ಬಂದಿದೆ. ಹಾಗಾಗಿ ಈಶ್ವರಪ್ಪನವರನ್ನ‌ ಗೆಲ್ಲಿಸಿ ಎಂದರು.

ನಾನು ಸೋಲುವುದಾದರೆ ನಮ್ಮ ಕಾರ್ಯಕರಿಗೆ ಕರೆಯಾಕೆ ಮಾಡ್ತೀರ
ನಮ್ಮ ಕಾರ್ಯಕರ್ತರನ್ನ ಕರೆ ಮಾಡಿ ಈಶ್ವರಪ್ಪನವರು ಸೋಲ್ತಾರೆ ಎಂದು ಹೇಳಿ ಕರೆಯಲಾಗುತ್ತಿದೆ. ಹಾಗಾದರೆ ನಮ್ಮ‌ಕಾರ್ಯಕರ್ತರನ್ನ‌ ಬೆದರಿಸುವ ಕೆಲಸ ಯಾಕೆ ಮಾಡ್ತೀರ ಎಂದು ಪ್ರಶ್ನಿಸಿದ ಈಶ್ವರಪ್ಪ, ಗೀತಾ ಶಿವರಾಜ್ ಕುಮಾರ್ ರನ್ನ ಡಮ್ಮಿ ಕ್ಯಾಂಡಿಡೇಟ್ ಎಂದು ಸಚಿವ ಮಧು ಬಂಗಾರಪ್ಪ ಸುಟ್ಟಾಗಿ ಈಶ್ವರಪ್ಪನವರಿಗೆ ಗಂಡಸುತನ ಇದ್ದರೆ ಬಿಜೆಪಿ ಟಿಕೇಟ್ ತರಬೇಕಿತ್ತು ಎಂದು ಕೇಳಿದ್ದಾರೆ. ನೀವು ಮತ್ತು ಶಿಕಾರಿಪುರದವರು ಹೊಂದಾಣಿಕೆ ಮಾಡಿಕೊಂಡರೆ ನಾನು ಟಿಕೇಟ್ ಹೇಗೆ ತರಲಿ ಎಂದು ಪ್ರಶ್ನಿಸಿದರು.

ಏ.12 ರಂದು ನಾಮಪತ್ರ ಸಲ್ಲಿಕೆ
ಚುನಾವಣೆಗೆ ಬಹಳ ದಿನ ಇದೆ ನನ್ನ ಗುರುತು ತೀರ್ಮಾನವಾಗಿಲ್ಲ. ಮತದಾನದ ದಿನಾಂಕ ನಿಗದಿಯಾಗಿದೆ. ಏ.12 ರಿಂದ‌ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. 25 ಸಾವಿರ ಕಾರ್ಯಕರ್ತರೊಂದಿಗೆ ಅದೇ ದಿನಾಂಕದಂದು ನಾಮಪತ್ರ ಸಲ್ಲಿಸುತ್ತಿರುವುದಾಗಿ ಈಶ್ವರಪ್ಪ ಘೋಷಿಸಿದ್ದಾರೆ.

ವರದಿ ಪ್ರಜಾ ಶಕ್ತಿ