ಶಿವಮೊಗ್ಗ ನಗರದ ಮಧುರ ಪ್ಯಾರಡೈಸ್ ಸಭಾಂಗಣದಲ್ಲಿ ನಡೆದ ಸೀನಿಯರ್ ಛೆಂಬರ್ ಇಂಟರ್ ನ್ಯಾಷನಲ್‍ ಶಿವಮೊಗ್ಗ ಭಾವನಾದ 2024 – 25ರ ಪದಗ್ರಹಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸೀನಿಯರ್ ಸುರೇಖ ಮುರಳೀಧರ್ ರವರು 2023 – 24 ಸಾಲಿನ ಯಶಸ್ವೀ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಅಧ್ಯಕ್ಷ ಸ್ಥಾನವನ್ನು ಸೀನಿಯರ್ ಶಶಿಕಲಾ ರವರಿಗೆ ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ನಗರದ ಶ್ರೀ ಸತೀಶ್ ಕುಮಾರ್ ಶೆಟ್ಟಿರವರು ನಿಮ್ಮ ಸಂಸ್ಥೆಯ ಅಡಿಯಲ್ಲಿ ಆಗುವಂತಹ ಸಮಾಜ ಸೇವಾ ಚಟುವಟಿಕೆಗಳು ಚಿರಕಾಲ ಉಳಿಯುವಂತಿರಲಿ. ಜನ ಪರವಾಗಿರಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Jikರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಚಿತ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ಪುಷ್ಪಾ ಶೆಟ್ಟಿ, ರಾಷ್ಟ್ರೀಯ ನಿರ್ದೇಶಕರಾದ ಸೀನಿಯರ್ ನವೀನ್ ಅಮೀನ್, ಶಿವಮೊಗ್ಗ ಭಾವನಾದ ನೂತನ ಕಾರ್ಯದರ್ಶಿ ಸೀನಿಯರ್ ಮಾಲ ರಾಮಪ್ಪ, ಖಜಾಂಚಿ ಸೀನಿಯರ್ ಸುಲೋಚನಾ ಮೂರ್ತಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಸೀನಿಯರ್ ವಾಣಿ ರತ್ನಾಕರ್ ಇನ್ನು ಮುಂತಾದ ಅನೇಕ ಸದಸ್ಯರು,‌ ಪ್ರಮುಖ ನಾಗರೀಕರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ