ನಗರದ ಬಸವನಗುಡಿ ಹಾಗೂ ಕೆಲವು ಬಡಾವಣೆಗಳಲ್ಲಿ 24*7 ನೀರಿನ ಬಿಲ್ ಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಮತ್ತು ದೂರುಗಳು ಕೇಳಿ ಬರುತ್ತಿವೆ.

ನಗರ ನೀರು ಸರಬರಾಜು ಮಂಡಳಿಯವರು ಪ್ರತಿ ತಿಂಗಳ ನೀರಿನ ತೆರಿಗೆ ಎಂದು ರೂ.175 ಮೊತ್ತದ ಬಿಲ್ ಗಳನ್ನು ವಿವಿಧ ಬಡಾವಣೆಗಳಲ್ಲಿ ನೀಡುತ್ತಿದ್ದಾರೆ.

ಇಲ್ಲಿಯವರೆಗೆ ಗ್ರಾಹಕರು ಆಯಾಯ ವರ್ಷದ ಅಂತ್ಯದಲ್ಲಿ ಅಂದರೆ ಮಾರ್ಚ್ 31ಕ್ಕೆ ಪ್ರತಿ ತಿಂಗಳಿಗೆ 175 ರೂ.ನಂತೆ 2100 ರೂ.ಗಳನ್ನು ಪಾವತಿಸುತ್ತಿದ್ದರು.ಚಚಚಚ
ಆದರೆ ಇದೀಗ ನಗರ ನೀರು ಸರಬರಾಜು ಮಂಡಳಿಯವರು ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳಿಗೆ ಯಾವುದೇ ಮಾಹಿತಿ ಹಾಗೂ ಪ್ರಕಟಣೆ ನೀಡದೆ, 247 ನೀರಿನ ಕುಂದು ಕೊರತೆಗಳ ಸಭೆಯನ್ನು ನಡೆಸದೆ ಏಕಾಏಕಿ ಪ್ರತಿ ತಿಂಗಳ ನೀರಿನ ಬಿಲ್ ಅನ್ನು ನೀಡುತ್ತಿರುವುದನ್ನು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಪ್ರಬಲವಾಗಿ ವಿರೋಧಿಸುತ್ತದೆ.

ಇಷ್ಟು ಸಾಲದು ಎಂಬಂತೆ ಈಗಾಗಲೇ ಯಾವುದೇ ಬಾಕಿಯನ್ನು ಇಟ್ಟುಕೊಳ್ಳದೆ ಪೂರ್ಣವಾಗಿ ನೀರಿನ ತಂದಾಯ ಪಾವತಿಸಿದ ಗ್ರಾಹಕರಿಗೆ 247 ಬಿಲ್ ನಲ್ಲಿ ಹಳೆಯ ಬಾಕಿ ಎಂದು ತೋರಿಸುತ್ತಿರುವುದು ಇವರ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ. 24*7 ಬಿಲ್ ನೀಡುವಾಗ ಹಿಂದಿನ ಬಾಕಿ ಇದೆಯೇ ಅಥವಾ ಇಲ್ಲವೇ ಎನ್ನುವ ದತ್ತಾಂಶಗಳನ್ನು ಪೂರ್ಣ ಮಾಡಿಕೊಳ್ಳದೆ ಬಿಲ್ ನೀಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ.
ಈ ರೀತಿ ಅಸಮರ್ಪಕ ಕಾರ್ಯನಿರ್ವಹಿಸುತ್ತಿರುವ ಜವಾಬ್ದಾರರಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿನಲ್ಲಿ ಇಡಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.

ನಗರ ನೀರು ಸರಬರಾಜು ಮಂಡಳಿಯವರು ಸಾರ್ವಜನಿಕ ಪ್ರಕಟಣೆ ನೀಡದೆ ಕೈಗೊಂಡಿರುವ ಪ್ರತಿ ತಿಂಗಳು ನೀರಿನ ಬಿಲ್ ಪಾವತಿಸುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಈ ಹಿಂದಿನಂತೆಯೇ ವಾರ್ಷಿಕ ಬಿಲ್ ಅನ್ನು ಪಾವತಿಸಲು ಅವಕಾಶ ನೀಡಬೇಕಾಗಿ ಶಿವಮೊಗ್ಗ ನಾಗರಿ ಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಕಾರ್ಯಪಾಲಕ ಇಂಜಿನಿಯರ್ ಅವರನ್ನು ಆಗ್ರಹಿಸುತ್ತದೆ. ಇದು ಜಾರಿಗೆ ಬರದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಈ ಮೂಲಕ ಎಚ್ಚರಿಸುತ್ತೆವೆ ಎಂದರು.

ಕೆ.ವಿ. ವಸಂತ ಕುಮಾರ್
ಪ್ರಧಾನ ಕಾರ್ಯದರ್ಶಿ

ಡಾ. ಎ. ಸತೀಶ್ ಕುಮಾರ್ ಶೆಟ್ಟಿ
ಸಂಘಟನಾ ಕಾರ್ಯದರ್ಶಿ

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ