ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ವಿರುದ್ಧ ಅಸಂಬದ್ಧ ಪದಗಳಿಂದ ಟೀಕೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ – ಮರಾಠ ಸಮುದಾಯದಿಂದ – ಬೃಹತ್ ಪಂಜಿನ ಪ್ರತಿಭಟನೆ – ಬಹಿರಂಗ ಕ್ಷಮೆಗೆ ಆಗ್ರಹ

ಬುದ್ಧ – ಬಸವ- ಅಂಬೇಡ್ಕರ್ ಅವರ ತತ್ವದ ಅನುಯಾಯಿ, ಸಾಮಾಜಿಕ ಕಳಕಳಿಯ ಚಿಂತಕ ,ಮರಾಠ ಸಮುದಾಯದ ಏಕೈಕ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರನ್ನು ಅಸಂಬದ್ಧ ಪದಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಟೀಕೆ ಮಾಡಿರುವುದನ್ನು ಖಂಡಿಸಿ ನಗರದ ಗೋಪಿ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಛತ್ರಪತಿ ಶಿವಾಜಿ ಮರಾಠ ಸಮಾಜ ಹಾಗೂ ಅಹಿಂದ ಪ್ರಮುಖ ಮುಖಂಡರು ಮತ್ತು ಛತ್ರಪತಿ ಶಿವಾಜಿ ಯುವ ವೇದಿಕೆಯ ಎಮ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಬೃಹತ್ ಪಂಜಿನ ಪ್ರತಿಭಟನೆ ನಡೆಸಿದರು.

ಬುದ್ಧ ಬಸವ ಅಂಬೇಡ್ಕರ್ ರವರುಗಳ ತತ್ವಗಳನ್ನು ಪ್ರತಿಪಾದಿಸುತ್ತಾ ಸರ್ವ ಜನಾಂಗದ ನಾಯಕರಾಗಿ ಯಾವುದೇ ಗಾಡ್ ಫಾದರ್ ಗಳಿಲ್ಲದೇ ತಳಮಟ್ಟದಿಂದ ಹಂತಹಂತವಾಗಿ ಬೆಳೆದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಬಗ್ಗೆ ಮಾತಾಡೋಕೆ ವಿಜಯೇಂದ್ರ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ತನ್ನ ಸ್ವಂತ ಹಣದಲ್ಲಿ ಸಾವಿರಾರು ಬಡಜನರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಜನರೇ ಬಯಸಿ, ಬೆಳೆಸಿದ ಕಾರ್ಯಕರ್ತರ ನಾಯಕ ಸಂತೋಷ್ ಲಾಡ್ ಅವರು ರಾಜ್ಯದ ಬಡವರ ಶಕ್ತಿ, ವಿದ್ಯಾರ್ಥಿಗಳ ಸ್ಫೂರ್ತಿ, ಶ್ರಮಿಕರ ಆಸ್ತಿ.ಸಂತೋಷ್ ಲಾಡ್ ನಿಮ್ಮ ಈ ಟೀಕೆಗೆ ಈ ರಾಜ್ಯದ ಶ್ರಮಿಕ ವರ್ಗದ ಜನ ಹಾಗೂ ಬಡ ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಕೂಡಲೇ ವಿಜೇಂದ್ರ ಅವರು ಮರಾಠ ಸಮುದಾಯದ ಹಾಗೂ ನಮ್ಮ ನಾಯಕರದ ಸಂತೋಷ್ ಲಾಡ್ ಅವರನ್ನು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮರಾಠ ಸಮುದಾಯದ ಮುಖಂಡರುಗಳಾದ ಡಾ. ತಾನಾಜಿ ಸಚಿನ್ ರಾವ್ ಸಿಂದೆ ಲೋಕೇಶ್ ರಾವ್, ದಿನೇಶ್ ರಾವ್, ಎಂ ಬಿ ಕವಿತಾ, ಕಿರಣ್ ಮೋರೆ, ಅಶೋಕ್ ರಾವ್ ಗೋರ್ಪಡೆ, ಪ್ರಶಾಂತ್ ರಾಯ್, ಜಿಎನ್ ಪರಶುರಾಮ್, ಪುನೀತ್ ರಾವ್, ಪುನೀತ್ ರಾವ್, ಅಹಿಂದ ಸಮಾಜಗಳ ಪ್ರಮುಖರಾದ ಹೆಚ್ .ಸಿ.ಯೋಗೀಶ್, ರೇಖಾ ರಂಗನಾಥ್, ನಾಗರಾಜ್ ಕಂಕರಿ ಚಂದ್ರ ಭೂಪಾಲ್ , ಕೆ ರಂಗನಾಥ್, ಶರತ್, ಕಲೀಮ್ ಪಾಷಾ, ಎನ್ ಕೆ ಶ್ಯಾಮಸುಂದರ್, ಶಿವಣ್ಣ , ಕುಮರೇಶ್, ಭಾಸ್ಕರ್, ಎಚ್‌ಪಿ ಗಿರೀಶ್ ವಿನಯ್ , ಲೋಕೇಶ್ , ಪವನ್ , ರಾಕೇಶ್, ಸುವರ್ಣ ನಾಗರಾಜ್ ,ಸೌಗಂಧಿಕಾ ,ಚಂದ್ರಕಲಾ ಸೆಟ್ಲ ಮಾರ್ಟಿನ್, ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ