ನಗರದ ಪೇಸ್ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಕೆ.ಎಸ್.ಈಶ್ವರಪ್ಪ ಬೆಂಬಲಿಸಿ ದಲಿತರ ಸಮಾವೇಶ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ಮಲೆನಾಡು ರೈತ ಸಮಿತಿ ಅಧ್ಯಕ್ಷ ತಿ.ನ.ಶ್ರೀನಿವಾಸ್ ದಲಿತ ಸಮಾಜದ ಮುಖಂಡಾರದ ಹೆಚ್.ಶಿವಾಜಿ, ಮಾಜಿ ಮೇಯರ್ ಲತಾ ಗಣೇಶ್, ಎಂ.ರಾಜು, ಹನುಮ ನಾಯ್ಕ್ , ಯೋಗೀಶ್, ಕೆಂಪಮ್ಮ, ಮೀನಾಕ್ಷಮ್ಮ ಉಪಸ್ಥಿತರಿದ್ದರು.

ದಲಿತ ಸಮಾಜದ ಮಕ್ಕಳು ವಿಧ್ಯಾವಂತರಾಗಬೇಕು ಬಡತನ ನಿವಾರಣೆಗೆ ವಿಧ್ಯಾಭ್ಯಾಸ ಬಹಳ ಮುಖ್ಯ. ನಮ್ಮ ತಾಯಿ ಅಡಿಕೆ ಸುಲಿದು‌ಕೂಲಿ ಕೆಲಸ ಮಾಡಿ ಕಷ್ಟ ಪಟ್ಟು ವಿಧ್ಯಾಭ್ಯಾಸ ಮಾಡಿಸಿದ್ದಾರೆ. ಎಸ್.ಎಸ್.ಎಲ್ ಸಿ ನಂತರ ನಾನು ಕೆಲಸಕ್ಕೆ ಹೋಗುವುದಾಗಿ ಹೇಳಿದೆ ಅವರು ಕಪಾಳಕ್ಕೆ ಹೊಡೆದು ವಿಧ್ಯಾಭ್ಯಾಸ ಮುಂದುವರೆಸಲು ಹೇಳಿದ್ದರು ನಂತರ ಡಿಗ್ರಿ ಮಾಡಿ ಇವತ್ತು ನಿಮ್ಮ ಮುಂದೆ ಶಾಸಕ ಮಂತ್ರಿ ಉಪ ಮುಖ್ಯಮಂತ್ರಿ ಯಾಗಿ ನಿಂತಿದ್ದೇನೆ ಅದಕ್ಕೆ ಕಾರಣ ನಿಮ್ಮ ಹಾಗೆ ಇದ್ದ ನನ್ನ ತಾಯಿ ಕಾರಣ.

ನನ್ನ ತಾಯಿ ಎರಡು ಹೊತ್ತು ಊಟ ಮಾಡಿದ್ದುನೋಡಿಲ್ಲ ಹೊಸ ಸೀರೆ ಉಟ್ಟಿದ್ದು ನೋಡಿಲ್ಲ.
ನೀವು ಎಷ್ಟಾದರು ಕಷ್ಟ ಪಟ್ಟು ನಿಮ್ಮ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಿ.

ನೀವು ಅಂಬೇಡ್ಕರ್ ಮುಂದೆ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುವುದಾಗಿ ಪ್ರತಿಜ್ಙೆ ಮಾಡಿ.

ನಿಮ್ಮಲ್ಲಿ ವಿದ್ಯಾವಂತರು ಇಲ್ಲವೆಂದರೆ ಯಾವ ಸರ್ಕಾರ ನಿಮಗೆ ಏನು ಮಾಡಿದರು ಪ್ರಯೋಜನವಾಗಲ್ಲ.

ಸರ್ಕಾರ ಕೊಡುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ನಿಮ್ಮನ್ನು ತಲುಪಲು ನೀವೆಲ್ಲಾ ವಿದ್ಯಾವಂತರಾಗಬೇಕು ಅಂಬೇಡ್ಕರ್ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಹೇಳಿದ್ದರು ನೀವು ಶಿಕ್ಷಣ ಪಡೆಯಲಿಲ್ಲ ಎಂದರೆ ಮಹಾ ಪುರಷನಿಗೆ ಅವಮಾನ ಮಾಡಿದಂತೆ.

ಇಲ್ಲಿಂದ ತೆರಳುಬಮವಾಗ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ತೀರ್ಮಾನ ತೆಗೆದುಕೊಂಡು ಹೋಗಿ.

ವಿಧ್ಯಾಭ್ಯಾಸಕ್ಕೆ ತೊಂದರೆಯಾದರೆ ನನ್ನನ್ನು ಸಂಪರ್ಕಿಸಿ ನಿಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ನಾನು ಸಿದ್ಧ.

ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾಗಿ ಅಂಬೇಡ್ಕರ್ ಹಾಗು ಮೋದಿ ಮೇಲೆ ಪ್ರಮಾಣ ಮಾಡಿ.

ಸರಸ್ವತಿ ಜಾಗದಲ್ಲಿ ನೀವೆಲ್ಲಾ ಸೇರಿದ್ದೀರಿ ಕುಡಿದು ಹೆಂಡತಿಗೆ ಹೊಡೆಯೊಲ್ಲ ಎಂದು ಪುರುಷರು ತೀರ್ಮಾನ ಮಾಡಿ.

ಚುನಾವಣ ಸಮಯ ನಡೆಯುತ್ತಿದೆ ಹಣ ಪಡೆದು ವೋಟು ಹಾಕಿದರೆ ಚುನಾವಣೆ ನಂತರ ನೀವು ಏನು ಕೆಲಸ ಮಾಡಿಸಿಕೊಳ್ಳಲು ಆಗಲ್ಲ ಆದ್ದರಿಂದ ಹಣಕ್ಕಾಗಿ ಮತ ಹಾಕಬೇಡಿ.

ಈಗ ಚುನಾವಣೆಯಲ್ಲಿ ಇನ್ನೊಬ್ಬ ಈಶ್ವರಪ್ಪ ತಂದು ನಿಲ್ಲಿಸಿದ್ದಾರೆ ಎಚ್ಚರಿಕೆಯಿಂದ ಕೆ.ಎಸ್.ಈಶ್ವರಪ್ಪ ಕ್ರಮ ಸಂಖ್ಯೆ 8 ಕಬ್ಬಿನ ಜೊತೆ ಇರುವ ರೈತ ಚಿಹ್ನೆಗೆ ಮತ ಹಾಕಿ ಎಂದು ಮನವಿ ಮಾಡಿದರು.

ವರದಿ ಪ್ರಜಾ ಶಕ್ತಿ