ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರ ಪರವಾಗಿ ಯುವ ಕಾಂಗ್ರೆಸ್ ನಿಂದ ಮತಯಾಚನೆ.
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ರವರ ಪರವಾಗಿ ನಗರದ ಜಿಲ್ಲಾಧಿಕಾರಿ ಕಚೇರಿಯ , ತಾಲೂಕು ಕಚೇರಿ, ಸ್ಮಾರ್ಟ್ ಸಿಟಿ ಆಫೀಸ್, ಹಾಗೂ ಹಲವು ಸರ್ಕಾರಿ ಇಲಾಖೆಗಳ ಅಧಿಕಾರಿಗಳು ನೌಕರರು ಸಿಬ್ಬಂದಿ ಪದವೀಧರ ಮತದಾರರ ಬಳಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ , ಯುವ ಕಾಂಗ್ರೆಸ್ ಪ್ರಮುಖರಾದ ಎಸ್,ಎಂ ಶರತ್, ಟಿವಿ ರಂಜಿತ್, ವಿನಯ್ ತಂದ್ಲೆ,ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಎಂ ರಾಹುಲ್, ಎಸ್ ಕುಮಾರೇಶ್ , ಮೋಹನ್, ಸುಹಾಸ್ ಗೌಡ, ಆರ್‌ಎಂ ಓಂ, ಭರತ್, ಮಸ್ತಾನ್, ಶಿವಕುಮಾರ್, ಸಾಯಿಲ್, ಜೈನ್ ಅಬ್ಬಾಸ್ ಹಾಗೂ ಇತರರು ಇದ್ದರು.