ನೋಬೆಲ್ ವರ್ಲ್ಡ್ ರೆಕಾರ್ಡ್ ಮಡಿದ ಜೆಸಿಐ ನ 24 ಗಂಟೆಗಳ ತರಬೇತಿ ಕಾರ್ಯಕ್ರಮ
ಜೆಸಿಐ ಸಂಸ್ಥೆಯಿಂದ 24 ಗಂಟೆಗಳ ನಿರಂತರ ತರಬೇತಿ ಕಾರ್ಯಕ್ರಮ ನೋಬೆಲ್ ವರ್ಲ್ಡ್ ರೆಕಾರ್ಡ್ ಮಡಿದೆ.
ಜೆಸಿ ಶಿವಮೊಗ್ಗ ರಾಯಲ್ ನೇತೃತ್ವದಲ್ಲಿ ಶಿವಮೊಗ್ಗದ ಎಲ್ಲಾ ಜೆಸಿಐ ಸಂಸ್ಥೆಗಳ ಸಹಯೋಗದೊಂದಿಗೆ 24 ನೇ ತಾರೀಖು “ಅನಾವರತ-24” ಎಂಬ ಶೀರ್ಷಿಕೆ ಅಡಿಯಲ್ಲಿ “ನೋಬೆಲ್ ವರ್ಲ್ಡ್ ರೆಕಾರ್ಡ್ ” 24 ಗಂಟೆಗಳ ನಿರಂತರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ ಜೆಎಫ್ಎಸ್ ಸುದರ್ಶನ್ ತಾಯಿ ಮನೆ ಮತ್ತು ಜೆಸಿಐ ಬಳಗ ಯಶಸ್ವಿಯಾಗಿದ್ದಾರೆ.
ಈ ತರಬೇತಿ ವಿಶೇಷತೆ ಎಂದರೆ 24 ತರಬೇತುದಾರರು 24 ವಿವಿಧ ವಿಷಯಗಳನ್ನು ಒಳಗೊಂಡ 24 ಗಂಟೆಗಳ ನಡೆದಿದೆ 1224 ಶಿಬಿರಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಬೇತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಜೆಎಫ್ಎಸ್ ಸುದರ್ಶನ್ ತಾಯಿ ಮನೆ ಅವರು ಮಾಧ್ಯಮ ಮಿತ್ರರಿಗೆ ಜೆಸಿಐ ಬಳಗಕ್ಕೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೂ ಜೆಸಿಐ ಬಳಗದಿಂದ ಧನ್ಯವಾದಗಳು ತಿಳಿಸಿರುತ್ತಾರೆ.