ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆಗಳಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಜೂನ್. 07 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ನಗರದ ಗಾಂಧಿಬಜಾರ್, ಲಷ್ಕರ್ ಮೊಹಲ್ಲಾ, ಸಾವರ್ಕರ್ ನಗರ, ಬಿ.ಹೆಚ್.ರಸ್ತೆ, ತಿರುಪಳಯ್ಯನಕೇರಿ, ಭರಮಪ್ಪನಗರ, ಎಂ.ಕೆ.ಕೆ ರಸ್ತೆ, ಓ.ಟಿ.ರಸ್ತೆ, ಕೋಟೇರಸ್ತೆ, ಎಸ್‍ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ನಾಗಪ್ಪಕೇರಿ, ಉಪ್ಪಾರಕೇರಿ, ತಿರುಪಳ್ಳಯ್ಯನ ಕೇರಿ, ಸಾವರ್ಕರ್ ನಗರ, ಪೆನ್ಷನ್ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್.ರಸ್ತೆ, ಮಹಾರಾಜ ರಸ್ತೆ, ಅಶೋಕರಸ್ತೆ, ತುಳುಜಾಭವಾನಿ ರಸ್ತೆ, ಉರ್ದು ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.