ರಾಜ್ಯ ಕಂಡ ಧೀಮಂತ ನಾಯಕರು, ಹಿಂದುಳಿದ ವರ್ಗಗಳ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ, ದಿವಂಗತ ಶ್ರೀ ಡಿ. ದೇವರಾಜು ಅರಸುರವರ 42ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪುಷ್ಪ ನಮನ ಸಲ್ಲಿಸುವ ಮುಖಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಟಿ. ಹಾಲಪ್ಪ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ ಮಂಜುನಾಥ್ ಜಿಲ್ಲಾ ಕಾರ್ಯದರ್ಶಿ ಯು. ಶಿವಾನಂದ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷರಾದ ಅನ್ನು ಸೇವಾದಳದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಬಾಬು ಒಬಿಸಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಓಬಿಸಿ ಕಾರ್ಯದರ್ಶಿ H.R.ಮಹೇಂದ್ರ ಅಕ್ರಂ,ಇನ್ನಿತರರು ಹಾಜರಿದ್ದರು.