DIVINE STAR ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಯಶಸ್ವಿಯಾಗಲೆಂದು ಗೋಕರ್ಣದ ಮಹಾಗಣಪತಿ ಮಹಾಬಲೇಶ್ವರ ದೇವಾಲಯದಲ್ಲಿ ಕುಟುಂಬದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು ನೆರವೇರಿಸಿದರು.
ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿರುವ ‘ಕಾಂತಾರ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ‘ಕಾಂತಾರ ಚಾಪ್ಟರ್ 1’ ಬಗ್ಗೆ ನಿರೀಕ್ಷೆಗಳು ಬಹಳಷ್ಟಿವೆ.‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಈಗಾಗಲೇ ಪ್ರಾರಂಭ ಮಾಡಿದ್ದಾರೆ. ರಿಷಬ್ ಶೆಟ್ಟರು ಪರಿಪೂರ್ಣ ಶ್ರಮ ಹಾಕಿ ಸಿನಿಮಾ ಉತ್ತಮವಾಗಿ ನಿರ್ದೇಶಿಸುತ್ತಿದ್ದಾರೆ.
ಚಿತ್ರೀಕರಣದ ನಡುವೆ ಕೆಲವು ಕರಾವಳಿಯ ದೇವಸ್ಥಾನಗಳಿಗೆ, ದೈವ ಸ್ಥಾನಗಳಿಗೂ ಭೇಟಿ ನೀಡಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಯಶಸ್ಸಿಗಾಗಿ ವಿಶೇಷ ಪೂಜೆ ಪ್ರಾರ್ಥನೆಗಳಲ್ಲಿ ತೊಡಗಿದ್ದಾರೆ.
ರಿಷಬ್ರ ಗೆಳೆಯ ರಕ್ಷಿತ್ ಶೆಟ್ಟಿಯವರ ಹುಟ್ಟುಹಬ್ಬ ಇದ್ದು, ಗೆಳೆಯನ ಮುಂಬರುವ ಚಿತ್ರಗಳು ಯಶಸ್ವಿಯಾಗಲೆಂದು ಅವರ ಹೆಸರಿನಲ್ಲಿಯೂ ವಿಶೇಷ ಪೂಜೆ ನಡೆಸಿ ಸಂಕಲ್ಪವನ್ನು ಮಾಡಿದ್ದಾರೆ. ದೇವಾಲಯದ ಅರ್ಚಕರದ ರಾಜಗೋಪಾಲ್ ವರ್ಮ ರವರು ಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು.