ಕರ್ನಾಟಕ ಸರ್ಕಾರದ ಮಾಜಿ ಉಪಮುಖ್ಯಮಂತ್ರಿಗಳು ಕೆ ಎಸ್ ಈಶ್ವರಪ್ಪನವರು ತಮ್ಮ 76ನೇ ಜನ್ಮದಿನದ ಪ್ರಯುಕ್ತ ಇಂದು ಅವರ ನಿವಾಸದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಹಾಗೂ ಮಾರಿಕಾಂಬ ಮೈಕ್ರೋ ಫೈನಾನ್ಸ್ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪನವರು,ಮಾಜಿನಗರ ಸಭಾ ಸದಸ್ಯರುಗಳಾದ ಶಂಕರ್ ಗನ್ನಿ, ಸುವರ್ಣ ಶಂಕರ್ ,ಅಮಾ ಪ್ರಕಾಶ್ ,ವಿಶ್ವಾಸ್ ಹಾಗೂ ಶ್ರೀನಿಧಿ ಅಶ್ವಥ್ ನಾರಾಯಣ್ ಶೆಟ್ಟಿ ,ಉಮೇಶ್ ಆರಾಧ್ಯ ,ಜಾದವ್ ,ಮಂಜುನಾಥ್ ,ಶಿವಾಜಿ ಹಾಗೂ ರಾಷ್ಟ್ರ ಭಕ್ತ ಬಳಗದವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭ ಕೋರಿದರು.