ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ
ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗ ದಲ್ಲಿ, ಶ್ರೀ ಗುರುದತ್ ಹೆಗ್ಡೆ,ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಮಿಥುನ್ ಕುಮಾರ್ ಜಿ.ಕೆ.
ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆಯನ್ನು ನಡೆಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಹಬ್ಬವನ್ನು ಎಲ್ಲರೂ ಸೇರಿ ಸಹಬಾಳ್ವೆಯಿಂದ ಆಚರಣೆ ಮಾಡಬೇಕು, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತವು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು, ಹಬ್ಬವನ್ನು ಧಾರ್ಮಿಕ ಮನೋಭಾವದಿಂದ ಎಲ್ಲಾ ಸಮುದಾಯವರೂ ಸೇರಿಕೊಂಡು ಶಾಂತ ರೀತಿಯಲ್ಲಿ ಆಚರಣೆ ಮಾಡೋಣ.
2) ಹೆಚ್ಚಿನದಾಗಿ ಯುವ ಪೀಳಿಗೆಯು ಯಾವುದೇ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ತಿಳಿಯದೇ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಾರೆ. ಇದರಿಂದ ಬೇರೆಯವರಿಗೆ ಪ್ರಚೋದನೆಯಾಗುತ್ತದೆಯೇ ಹೊರತು, ಸಮಾಜಕ್ಕೆ ಯಾವುದೇ ರೀತಿಯ ಒಳಿತು ಆಗುವುದಿಲ್ಲ ಮತ್ತು ಸಮಸ್ಯೆಗಳು ಉಲ್ಭಣವಾಗುವ ಸಾಧ್ಯತೆ ಇರುವುದರಿಂದ ಯಾವುದೇ ವಿಷಯದ ಬಗ್ಗೆ ಮಾಹಿತಿ ಇದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೊದಲು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ, ಅಧಿಕಾರಿಗಳು ಅದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಲ್ಳುವುದು ಮುಖಂಡರಾದ ನಿಮ್ಮೆಲ್ಲರ ಜವಾಬ್ದಾರಿಯೂ ಸಹಾ ಆಗಿರುತ್ತದೆ. ಯಾವುದೇ ಘಟನೆಗೆ ಸಂಬಂದಿಸಿದಂತೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಪ್ರಮುಖವಾಗಿ ಯುವ ಪೀಳಿಗೆಗೆ ತಿಳಿಹೇಳಿ.
3) ಹಬ್ಬದ ಆಚರಣೆಯ ಸಂದರ್ಭದಲ್ಲಿ ನೀರು, ಸ್ವಚ್ಚತೆ ಮತ್ತು ಇನ್ನಿತರೆ ಮೂಲ ಭೂತ ಸೌಕರ್ಯಗಳ ಕುರಿತಂತೆ ಜಿಲ್ಲಾಡಳಿತದಿಂದ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ಸಮಸ್ಯೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. *ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡೋಣ ಎಂದು ಹೇಳಿದರು.*
ಮಾನ್ಯ ಪೊಲೀಸ್ ಅಧೀಕ್ಷಕರು ಸಭೆಯನ್ನುದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು…
1) ಯಾವುದೇ ಹಬ್ಬವನ್ನು ಆಚರಣೆ ಮಾಡುವಾಗ ನಾವೆಲ್ಲರೂ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸುತ್ತೇವೆ. ಆದ್ದರಿಂದ ಹಬ್ಬದ ಆಚರಣೆಗೆ ಎಲ್ಲರೂ ಸಹಾಕರ ನೀಡುವುದು ಮುಖ್ಯವಾಗಿರುತ್ತದೆ.
2) ಸಮಾಜದಲ್ಲಿ ಯಾರೋ ಕೆಲವು ಜನ ಕಿಡಿಗೇಡಿಗಳು ಎಲ್ಲಿಯೋ ನಡೆದ ಸಣ್ಣಪುಟ್ಟ ಘಟನೆಗಳನ್ನು ದೊಡ್ಡದು ಮಾಡಿ ಸಮಸ್ಯೆಯನ್ನುಂಟು ಮಾಡುತ್ತಾರೆ. ಆದ್ದರಿಂದ ಮುಖಂಡರಾದ ನೀವು ಗಳು ಯಾವುದೇ ಸಮಸ್ಯೆಯುಂಟಾಗದಂತೆ ನೋಡಿಕೊಳ್ಳಬೇಕು ಮತ್ತು ಈ ಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಉಳಿದವರಿಗೂ ಸಹಾ ತಿಳಿಸಬೇಕು.
3) ಜಿಲ್ಲೆಯಾದ್ಯಂತ ಈಗಾಗಲೇ ಠಾಣಾ ಮಟ್ಟದಲ್ಲಿ ಮೊಹಲ್ಲಾ ಸಭೆ ಮತ್ತು ಬೀಟ್ ಸಮಿತಿ ಸಭೆಗಳನ್ನು ನಡೆಸಲಾಗುತ್ತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ನೀಡಿ ಇನ್ನು ಹೆಚ್ಚಿನ ಸಭೆಗಳನ್ನು ನಡೆಸಲಾಗುವುದು.
4) ಯಾವುದೆ ಸಮಸ್ಯೆ ಇದ್ದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಾಗ ಕಾನೂನು ಚೌಕಟ್ಟಿನ ಒಳಗೆ ಸಮಸ್ಯೆಯನ್ನು ಮೂಲದಲ್ಲಿಯೇ ಬಗೆಹರಿಸಲು ಸಾಧ್ಯವಿರುತ್ತದೆ.
5) ಆಕ್ಷೇಪಾರ್ಹ ವಿಡಿಯೋ ಗಳನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಾಗ ಅದು ಬಹುಬೇಗ ಪ್ರಸರಿಸಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆಕ್ಷೇಪಾರ್ಹ ವಿಡಿಯೋ ಗಳನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡದಂತೆ ತಿಳಿ ಹೇಳಿ.
6) ಕಳೆದ ಮೂರು ವರ್ಷಗಳಲ್ಲಿ ಸಮಸ್ಯೆಯನ್ನುಂಟು ಮಾಡಿದಂತಹ ವ್ಯಕ್ತಿಗಳನ್ನು ಗುರುತಿಸಿ ಅಂತಹವ ವಿರುದ್ದ ಮುಂಜಾಗೃತಾ ಕ್ರಮ, ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿದ್ದು, ಹಬ್ಬದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಂಜಾಗೃತೆವಹಿಸಲಾಗಿದೆ.
7) ಹಬ್ಬದ ಸಂದರ್ಭದಲ್ಲಿ ಮತ್ತು ವಿಶೇಷವಾಗಿ ಪ್ರಾರ್ಥನೆ ಮಾಡುವ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳನ್ನು ನಿಯೋಜನೆ ಮಾಡಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲರೂ ಸೇರಿ ಸಹಬಾಳ್ವೆಯಿಂದ ಹಬ್ಬವನ್ನು ಆಚರಣೆ ಮಾಡೋಣ.
ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಷಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ಮಾಯಣ್ಣ ಗೌಡ, ಆಯುಕ್ತರು ಮಹಾನಗರ ಪಾಲಿಕೆ ಶಿವಮೊಗ್ಗ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ, ಶ್ರೀ ಶಿವಯೋಗಿ, ಉಪ ನಿರ್ದೇಶಕರು, ಪಶು ವೈಧ್ಯಕೀಯ, ಇಲಾಖೆ, ಪೊಲೀಸ್ ಉಪಾಧೀಕ್ಷಕರು ಮತ್ತು ಎಲ್ಲಾ ಸಮುದಾಯದ ಮುಖಂಡರರುಗಳು ಉಪಸ್ಥಿತರಿದ್ದರು.