ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮಗನ ಮದುವೆ ಅದ್ದೂರಿಯಾಗಿ ನಡೆಯಿತು. ನಗರದ ಸರ್ಜಿ ಕನ್ವೆನ್ಷನಲ್ ಹಾಲ್ ನಲ್ಲಿ ಚನ್ನಬಸಪ್ಪ ರವರ ಎರಡನೇ ಪುತ್ರ ವರುಣ್ ಮತ್ತು ಲಕ್ಷ್ಮಿ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಶುಭ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ,ಸಂಸದ ಬಿ ವೈ ರಾಘವೇಂದ್ರ , ಜಿಲ್ಲಾಧ್ಯಕ್ಷ ಮೇಘರಾಜ್ , ಶಾಸಕರಾದ ಅರಗ ಜ್ಞಾನೇಂದ್ರ , ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು , ಡಿಎಸ್ ಅರುಣ್ , ಧನಂಜಯ್ ಸರ್ಜಿ , ಭಾರತಿ ಶೆಟ್ಟಿ ಮತ್ತು ಮಾಜಿ ಶಾಸಕರು ಮುಖಂಡರು ಸದಸ್ಯರು ಕಾರ್ಯಕರ್ತರು ಹಿತೈಷಿಗಳು ಬಂಧು ಮಿತ್ರರು ನೂತನ ವಧು ವರರಿಗೆ ಶುಭಾಶಯ ಕೋರಿದ್ದಾರೆ.