ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ವಿವಿಧ ಕಡೆ ವಿನೂತನ ಪ್ರತಿಭಟನೆಗೆ ನಡೆಸಿತು. ನೆಹರು ರಸ್ತೆಯಲ್ಲಿ ಶಾಸಕ ಚನ್ನಬಸಪ್ಪ ರವರು ಜಿಲ್ಲಾಧ್ಯಕ್ಷ ಮೇಘರಾಜ್ ದ್ವಿಚಕ್ರ ವಾಹನವನ್ನು ಚಟ್ಟದಲ್ಲಿ ಕಟ್ಟಿಕೊಂಡು ಬಂದರು. ಪರಿಷತ್ ಸದಸ್ಯ ಡಿ ಎಸ್ ಅರುಣ್ ರವರು ಕುದುರೆ ಏರಿ ಬಂದರು.
ಮಹಿಳಾ ಮೋರ್ಚಾ ವತಿಯಿಂದ ಗೋಪಿ ವೃತ್ತದಲ್ಲಿ ತರಕಾರಿ ಚೀಲಗಳನ್ನ ತಂದು ಪ್ರತಿಭಟನೆ ನಡೆಸಿತು, ಟೆಮೋಟೋ ಕೆಜಿಗೆ 80ರೂ. ಜೊತೆಗೆ ಅಡುಗೆ ಉಪಯೋಗಿಸುವ ಇತರ ವಸ್ತುಗಳು ಬೆಲೆ ಗಗನಕ್ಕೆ ಏರಿದ್ದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಮತ್ತೊಂದೆಡೆ ಜೈಲ್ ರಸ್ತೆಯಲ್ಲಿ ಯುವ ಮೋರ್ಚಾದ ಕಾರ್ಯಕರ್ತರು ಮಾರುತಿ 800 ಕಾರಿನ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಯ ಅಣಕು ವೇಷ ಹಾಕಿಕೊಂಡು ಕಾರ್ಯಕರ್ತರು ವಿನೂತನವಾಗಿ ಪ್ರತಿಭಟಸಿದರು.
ಬಾಲರಾಜ್ ಅರಸು ರಸ್ತೆಯಲ್ಲಿ ರೈತ ಮೋರ್ಚದ ವತಿಯಿಂದ ಮಥುರಾ ಪ್ಯಾರಡೈಸ್ ನಿಂದ ಎತ್ತಿನ ಗಾಡಿ ಓಡಿಸಿಕೊಂಡು ಬಂದು ಸರ್ಕಾರ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದರು.
ಇನ್ನೊಂದೆಡೆ ಕಸ್ತೂರಿ ಬಾ ರಸ್ತೆಯಲ್ಲಿ ಒಬಿಸಿ ಮೋರ್ಚಾದ ಕಾರ್ಯಕರ್ತರು ಬೈಕ್ ಗೆ ಹಗ್ಗ ಕಟ್ಟಿಕೊಂಡು ಎಳೆದುಕೊಂಡು ಬಂದರು. ಓಬಿಸಿ ವರ್ಗಕ್ಕೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಭಾನುಪ್ರಕಾಶ್, ಎಂಎಲ್ ಸಿ ಭಾರತಿ ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗಾಯಿತ್ರಿ ಸಾಮಾಜಿಕ ಜಾಲತಾಣದ ಅಣ್ಣಪ್ಪ, ಮುಂತಾದವರು ಉಪಸ್ಥಿತರಿದ್ದರು.