ಮಾಜಿ ವಿಧಾನ ಪರಿಷತ್ ಸದಸ್ಯರು ಬಿಜೆಪಿ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ ನಿಧಾನರಾದ ಹಿನ್ನೆಲೆಯಲ್ಲಿ ಮತ್ತೂರು ಗ್ರಾಮದಲ್ಲಿರುವ ಭಾನುಪ್ರಕಾಶ್ ನಿವಾಸಕ್ಕೆ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ಸಾಂತ್ವನ ಹೇಳಿದರು.
ಭಾನುಪ್ರಕಾಶ್ ಅವರು ಭಾರತೀಯ ಜನತಾ ಪಕ್ಷದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಪಕ್ಷದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸಿದ್ದರು ಎಂದು ನೆನೆದರು. ಮಧು ಬಂಗಾರಪ್ಪಗೆ ಜೊತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾರ್ , ಜಿಡಿ ಮಂಜುನಾಥ್ ಸಾಥ್ ನೀಡಿದರು.