ನಗರದ ಹಲವೆಡೆ ಟ್ರಾಫಿಕ್ ಪೊಲೀಸರು ಖಾಸಗಿ ಶಾಲೆಯ ವಾಹನಗಳ ದಾಖಲಾತಿಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಲವು ವಾಹನಗಳ ದಾಖಲಾತಿಯ ನ್ಯೂನತೆ ಕಂಡು ಬಂದಿದ್ದು ಅದರ ವಿರುದ್ಧ ಟ್ರಾಫಿಕ್ ಇನ್ಸ್ಪೆಕ್ಟರ್ ಭಾರತಿ ರವರು ಕ್ರಮ ಕೈಗೊಂಡಿದ್ದಾರೆ.


ಹಲವು ಕಡೆಗಳಲ್ಲಿ ಪ್ಯಾಸೆಂಜರ್ ಆಟೋ ಮತ್ತು ಓಮ್ನಿ ವ್ಯಾನ್ ಗಳಲ್ಲಿ ಸೀಟಿಂಗ್ ಕೆಪಾಸಿಟಿಗಿನ್ನ ಅಧಿಕವಾಗಿ ಮಕ್ಕಳ ನ್ನು ತುಂಬಿದ್ದು ಅಂತ ವಾಹನ ಚಾಲಕರ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಯಿತು.
ಟ್ರಾಫಿಕ್ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಪೋಷಕರ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು ಇನ್ನಾದರೂ ಪೋಷಕರು ಎಚ್ಚೆತ್ತುಕೊಂಡು ಟ್ರಾಫಿಕ್ ಪೊಲೀಸರ ಜೊತೆ ಕೈಜೋಡಿಸಿ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಬೇಕು.

ವರದಿ ಪ್ರಜಾ ಶಕ್ತಿ