ಜೆಸಿಐ ಶಿವಮೊಗ್ಗ ವಿವೇಕ್ , ” ನಮ್ಮ ದೇಶ ನಮ್ಮ ಹೆಮ್ಮೆ, ನಮ್ಮ ಪರಿಸರ ನಮ್ಮ ಜವಾಬ್ದಾರಿ ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಪಾರ್ಕಿನಲ್ಲಿ ಹಮ್ಮಿಕ್ಕೊಂಡಿತ್ತು.

ಈ ಕಾರ್ಯಕ್ರಮದ ಮುಖ್ಯ ಅಥಿತಿ ಆಗಿ ಭಾಗವಹಿಸಿದ್ದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಅರುಣ್ ಡಿ.ಎಸ್ ರವರು ದಾರ್ಶನಿಕರ ಹಾಗೂ ಸಾಧಕರ ಭಾವ ಚಿತ್ರ ಹಾಗೂ ಪ್ರೇರಣಾ ದಾಯಕ ಹೇಳಿಕೆಗಳನ್ನು ಹೊಂದಿದ ವಿಶಿಷ್ಟ ಬೋರ್ಡ್ ಗಳನ್ನು ಅನಾವರಣ ಗೊಳಿಸಿದರು ಹಾಗೂ ವನ ಮಹೋತ್ಸವಕ್ಕೆ ಚಾಲನೆ ನೀಡಿದರು.

ಜೆಸಿಐ ಶಿವಮೊಗ್ಗ ವಿವೇಕ್ ಪಾರ್ಕಿನಲ್ಲಿ ಮಾಡುತ್ತಿರುವ ಕ್ರಿಯಾಶೀಲ ಹೊಸ ಹೊಸ ಪ್ರಯತ್ನ ಹಾಗೂ ಸ್ವಾಮಿ ವಿವೇಕಾನಂದ ಪಾರ್ಕಿನಲ್ಲಿ ನಡೆಸಿಕೊಂಡು ಬರುತ್ತಿರುವ ಉಚಿತ ಯೋಗ ತರಭೇತಿ ಹಾಗೂ ವಿಶೇಷ ಹಸಿರೀಕರಣ ಕಾರ್ಯವನ್ನು ಶ್ಲಾಘಿಸಿದರು.

ಹೇಗೆ ನಗರ ಪ್ರದೇಶದಲ್ಲಿ ಸಮುದಾಯ ಭವನಗಳಿಗೆ ಆದ್ಯತೆ ನೀಡಿದ್ದೇವೆಯೋ ಹಾಗೆ ಪಾರ್ಕ್ ಗಳ ನಿರ್ಮಾಣದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ ಎನ್ನುವ ಮಾತಿಗೆ ನೆರೆದ ಜನ ಮೆಚ್ಚುಗೆ ಸೂಚಿಸಿದರು.

ರಾಜ್ಯದ ಹಾಗೂ ರಾಷ್ಟ್ರದ ಅರಣ್ಯ ಸಂಪತ್ತು ಕಾಪಾಡಿಕ್ಕೊಳ್ಳುವುದರ ಅಗತ್ಯತೆ ಬಗ್ಗೆ ಗಮನ ಸೆಳೆದರು.ಒಳ್ಳೆಯ ಸಮಾಜಮುಖಿ ಕೆಲಸಕ್ಕೆ ಯಾವಾಗಲೂ ಜನರ ಸಹಯೋಗ ವಿರುತ್ತದೆ, ಈ ಸಮಾಜಮುಖಿ ಕೆಲಸವನ್ನು ಮುಂದುವರೆಸಿಕೊಂಡು ಹೋಗಿ ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದ ಪಾರ್ಕಿಗೆ ಅವಶ್ಯವಿರುವ ಲೈಟಿಂಗ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಗಳನ್ನು ತಮ್ಮ ಶಾಸಕರ ಅನುದಾನದಲ್ಲಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ವಿವೇಕ್ ನ ಅಧ್ಯಕ್ಷರಾದ ಸಂಜಯ್ ಕುಮಾರ್ ಕೆ ವಹಿಸಿದ್ದರು.

ಸ್ವಾಮಿ ವಿವೇಕಾನಂದ ಪಾರ್ಕಿನ ಪರಿಕಲ್ಪನೆ ನೀಡಿದ ಜೆಸಿ ಸತೀಶ್ ಕುಮಾರ್ ಎಸ್ ಎಸ್, ಜೆಸಿ ಕಾಟನ್ ಜಗದೀಶ್, ಭದ್ರೀಶ್ ಬಿಟಿ, ಉದಯ್ ಕದಂಬ, ಚಂದ್ರಹಾಸ್ ಶೆಟ್ಟಿ, ಭಾರತಿ ಹೆಚ್ ಡಿ, ಇನ್ನಿತರ ಸದಸ್ಯರು ಹಾಗೂ ಕಾರ್ಯಕ್ರಮದ ಸಹಭಾಗಿತ್ವ ವಹಿಸಿದ್ದ ಹೋಟೆಲ್ ಶುಭಂ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಪರಿವರ್ತನ ಸೇವಾ ಬಳಗ ದ ಸದಸ್ಯರು, ಹಾಗೂ ಎಲ್ಬಿಎಸ್ ಮತ್ತು ಅಶ್ವತ್ಥ್ ನಗರದ ನಿವಾಸಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ