ಶಿವಮೊಗ್ಗ ಟೌನ್ ಬುದ್ಧ ನಗರದ ವಾಸಿ ರಂಜಿತ ಮತ್ತು ಅವರ ತಾಯಿ ರಾಜೇಶ್ವರಿ ರವರು ಶಿವಮೊಗ್ಗ ಟೌನ್ ಬಿ. ಹೆಚ್ ರಸ್ತೆಯ ಸಂಗಮ್ ಟೈಲರ್ ಎದುರು ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ರಾಜೇಶ್ವರಿ ಅವರು ಧರಿಸಿದ್ದ 32 ಗ್ರಾಂ ತೂಕದ ಬಂಗಾರದ ಸರವನ್ನು ಕಳೆದುಕೊಂಡಿರುತ್ತಾರೆ.

ಆ ಸರವು ಸಂಗಮ್ ಟೈಲರ್ ನ ಮಾಲೀಕರಾದ ಶ್ರೀ ಕುಮಾರ್ ರವರಿಗೆ ಸಿಕ್ಕಿದ್ದು, ಶ್ರೀ ಕುಮಾರ್ ರವರು ಬಂಗಾರದ ಸರವನ್ನು ಕೋಟೆ ಪೊಲೀಸ್ ಠಾಣೆಗೆ ತಂದು ಹಾಜರ್ ಪಡಿಸಿ ಪ್ರಾಮಾಣಿಕತೆಯನ್ನು ಮೆರೆದಿರುತ್ತಾರೆ. ನಂತರ ಶ್ರೀ ಗುರು ಬಸವರಾಜ್ ಪಿಐ ಕೋಟೆ ಪೊಲೀಸ್ ಠಾಣೆ ರವರ ಸಮ್ಮುಖದಲ್ಲಿ ಬಂಗಾರದ ಸರವನ್ನು ಮಾಲೀಕರಾದ ರಾಜೇಶ್ವರಿ ರವರಿಗೆ ಹಸ್ತಾಂತರಿಸಲಾಗಿರುತ್ತದೆ. ಶ್ರೀ ಕುಮಾರ್ ರವರ ಈ ನಡೆಯು ಪ್ರಶಂಸನೀಯವಾಗಿರುತ್ತದೆ.

ವರದಿ ಪ್ರಜಾ ಶಕ್ತಿ