ಶಿವಮೊಗ್ಗ ನಗರದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಶಾಲಾ ವಿಧ್ಯಾರ್ಥಿಗಳ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

1) ವಿದ್ಯಾರ್ಥಿ ಜೀವನದಲ್ಲಿ 14 ರಿಂದ 18 ರ ವರೆಗಿನ ಈ ಹದಿಹರೆಯದ ವಯಸ್ಸು ತುಂಬಾ ಪ್ರಾಮುಖ್ಯೆತೆಯನ್ನು ಪಡೆದುಕೊಂಡಿದೆ ಏಕೆಂದರೆ ಈ ವಯಸಿನಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ದಾರಿಯು ಮುಂದೆ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಸರಿ ಮತ್ತು ತಪ್ಪು ವಿಚಾರಗಳ ಆಯ್ಕೆಯ ವಿಚಾರದಲ್ಲಿ ದ್ವಂದ್ವಗಳು ಸಾಕಷ್ಟು ಇರುತ್ತವೆ. ಆದರೆ ಸಾಮಾನ್ಯವಾಗಿ ನೀವು ಉತ್ತಮ ಸ್ನೇಹಿತರ ಸಹವಾಸ ಮಾಡದೇ ಇದ್ದಾಗ ಸಹಜವಾಗಿ ತಪ್ಪು ದಾರಿಯಲ್ಲಿ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಾಗರೂಕರಾಗಿ ಮತ್ತು ನೀವು ಆಯ್ದು ಕೊಳ್ಳುವ ಮಾರ್ಗದ ಬಗ್ಗೆ ಗಮನ ಇರಲಿ.

2) ಮೊಬೈಲ್ ಫೋನ್, ರೀಲ್ಸ್ ಗಳು ಹಾಗೂ ಇತರೆ ಸಾಮಾಜಿಕ ಜಾಲ ತಾಣಗಳ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಹದಿಹರೆಯ ವಯಸ್ಸಿನಲ್ಲಿ ಅಪರಾಧಿಕ ಪ್ರೌವೃತ್ತಿಯು ಹೆಚ್ಚುತ್ತಿದ್ದು, ಶಿಕ್ಷಕರು ಕೂಡ ಈ ಬಗ್ಗೆ ವಿಶೇಷ ಗಮನ ಹರಿಸಬೇಕಾದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕೇವಲ ಉತ್ತಮ ಅಂಕ ಗಳನ್ನು ಪಡೆಯುವ ಬಗ್ಗೆ ಮಾತ್ರವಲ್ಲ, ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಬಗ್ಗೆಯೂ ಕೂಡ ಗಮನ ನೀಡಬೇಕು. ಗುರುಹಿರಿಯರು, ಪೋಷಕರು ಹಾಗೂ ಶಿಕ್ಷಕರು ಸಹಾ ವಿದ್ಯಾರ್ಥಿಗಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿ ಹೇಳಬೇಕು, ಹದಿಹರೆಯದ ವಯಸ್ಸಿನಲ್ಲಿ ಒಂದು ಬಾರಿ ತಪ್ಪು ಆಯ್ಕೆಯಿಂದ ದಾರಿ ತಪ್ಪಿದರೆ ಪುನಾಃ ಸರಿ ದಾರಿಗೆ ಮರಳುವುದು ಕಷ್ಟ ಸಾಧ್ಯವಿರುತ್ತದ ಆದ್ದರಿಂದ ವಿದ್ಯಾರ್ಥಿಗಳು ಕೂಡ ದೊಡ್ಡವರ ಮಾತಿಗೆ ಬೆಲೆ ನೀಡಬೇಕು ಆಗ ಮಾತ್ರ ಯಾವುದೇ ವಿದ್ಯಾರ್ಥಿಯು ಉತ್ತಮ ಪ್ರಜೆಯಾಜೆಯಾಗಿ ರೂಪುಗೊಳ್ಳಲು ಸಾಧ್ಯವಿರುತ್ತದೆ.

3) ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು, ಸಮಾಜದಲ್ಲಿ ನೀವು ಸ್ವಾವಲಂಬಿಯಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಶ್ರಮಪಡುತ್ತಿದ್ದು, ಯಾವುದೋ ಕ್ಷುಲ್ಲಕ ವಿಚಾರಗಳ ಕಡೆ ಗಮನ ನೀಡಿ ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ, ಈಗ 5 ರಿಂದ 6 ವರ್ಷಗಳು ನೀವು ಶ್ರಮ ಪಟ್ಟು ಶಿಕ್ಷಣವನ್ನು ಪೂರೈಸಿದರೆ ಮುಂದೆ ನೀವು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಉನ್ನತ ಸ್ಥಾನಕ್ಕೆ ಏರಿ ಇತರರಿಗೆ ಮಾದರಿಯಾಗ ಬಹುದು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬಹುದಾಗಿರುತ್ತದೆ.

ಸಮಾಜದಲ್ಲಿ ಎಲ್ಲರೂ ಒಂದೆ ಯಾವುದೇ ಬೇದ ಭಾವ ಇಲ್ಲದೇ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಬೇಕು, ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಮೆಹಬೂಬಿ, ಮುಖ್ಯ ಶಿಕ್ಷಕರು, ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಶ್ರೀ ನಾಗರಾಜ್, ಟ್ರಸ್ಟಿ, ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಶಿಕ್ಷಕರು, ಮತ್ತು ವಿಧ್ಯಾರ್ಥಿಗಳು ಉಪಶ್ತಿತಿರಿದ್ದರು.

ವರದಿ ಪ್ರಜಾ ಶಕ್ತಿ