ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ನೂತನ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರಿಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ನಗರದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳ ಪರಿಹಾರಕ್ಕೆ ಸಲಹೆ ಸೂಚನೆಗಳನ್ನು ನೀಡಿದರು. ಹಾಗೆಯೇ ಅಕ್ರಮವಾಗಿ ನಿರ್ಮಿಸಲಾದ ಸೂಡಾ ಶೆಡ್ ತೆರವುಗೊಳಿಸಲು ಆಗ್ರಹಿಸಿದರು.
ಪಾಲಿಕೆಯ ಹಿಂದಿನ ಆಯುಕ್ತರು ನಗರದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಸಾರ್ವಜನಿಕರು, ಸಾಮಾನ್ಯರ ಕುಂದು ಕೊರತೆಗಳ ಬಗ್ಗೆ ಮೆಸೇಜ್ ಬಂದರೆ ಸಾಕು, ತಕ್ಷಣವೇ ಸಂಬಂಧಪಟ್ಟ ಸಿಬ್ಬಂದಿಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದರು ಹಾಗೂ ಕಚೇರಿಗೆ ಬಂದ ಎಲ್ಲಾ ವರ್ಗದವರಿಗೂ ಸ್ಪಂದಿಸುತ್ತಿದ್ದರು.
ತಾವು ಉಪ ಆಯುಕ್ತರಾಗಿ ಇಲ್ಲಿ ಇದ್ದು ಹೋದಂತವರು, ಇಲ್ಲಿಯ ನಗರದ ಸಮಸ್ಯೆಗಳು ತಮಗೆ ತಿಳಿದಿರುತ್ತದೆ, ನಿಮ್ಮಿಂದ ನಗರದ ಸಮಸ್ಯೆಗಳ ಪರಿಹಾರದ ನೀರಿಕ್ಷೆ ಇಟ್ಟುಕೊಂಡಿದ್ದೇವೆ ಎಂದು ಒಕ್ಕೂಟದ ಸದಸ್ಯರು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧ್ಯಕ್ಷರಾದ ಎಸ್ ಆರ್ ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ,ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ.ಅಶೋಕ್ ಕುಮಾರ್, ಸೀತಾರಾಮ್ ಇಕ್ಬಾಲ್ ನೇತಾಜಿ, ಚನ್ನವೀರಪ್ಪ ಗಾಮನಗಟ್ಟಿ, ಮ್ಯಾಥ್ಯೂ, ದತ್ತಾತ್ರೇಯ, ಅರ್ಪುದ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.