ನಗರ ಆರೋಗ್ಯ ಕೇಂದ್ರ ಉಜ್ಜನಿಪುರ ಭದ್ರಾವತಿ ಇವರ ವತಿಯಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಕ್ಕಳಿಂದ ಜಾಗೃತಿ ಜಾತ ನಡೆಸಿ ಕರಪತ್ರಗಳನ್ನು ನೀಡಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಮನೋಹರ್ , ಸೊಳ್ಳೆಗಳನ್ನು ನಿಯಂತ್ರಣ ಮಾಡಿದರೆ ಡೆಂಗ್ಯೂ ಹರಡುವಿಕೆ ತಡೆಗಟ್ಟಬಹುದು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ
ನಗರಸಭಾ ಸದಸ್ಯರು ಆದ ಬಸವರಾಜ್,
ಆರೋಗ್ಯ ನಿರೀಕ್ಷಣಾಧಿಕಾರಿ ಮನೋಹರ್, ಪಿ ಎಚ್ ಸಿ ಓ ರಮ್ಯಾ,ಮಾರ್ಘರೇಟ್, ಪೂರ್ಣಿಮಾ, ಜಯಶ್ರೀ, ಶಾಲಾ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.

ವರದಿ ಪ್ರಜಾ ಶಕ್ತಿ