ಅಕ್ಷಯ ತೃತೀಯ ದಿನದಂದು ಮದ್ಯಾಹ್ನ ಇಬ್ಬರು ಮಹಿಳೆಯರು ಶಿವಮೊಗ್ಗ ಬಿಹೆಚ್ ರಸ್ತೆ, ಭೀಮಾ ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ಬಂಗಾರ ಖರೀದಿ ಮಾಡಲು ಬಂದು ಲಾಕೆಟ್ ಕೌಂಟರ್ ಹತ್ತಿರ ಹೋಗಿ ಲಾಕೆಟ್ ಟ್ರೇ ತೆಗೆಸಿ, ಟ್ರೇನಲ್ಲಿಟ್ಟಿದ್ದ 3 ಬಂಗಾರದ ಲಾಕೆಟ್ ಪಡೆದುಕೊಂಡು ನೋಡುವವರಂತೆ ನಟಿಸಿ
ಸುಮಾರು 3 ಗ್ರಾಂ 470 ಮೀಲಿ ತೂಕದ 27,000/-ರೂ ಬೆಲೆಬಾಳುವ 3 ಲಾಕೆಟ್ಗಳನ್ನು ಕಳ್ಳತನ ಮಾಡಿ
ಕೈಚಳಕ ತೋರಿಸಿದ್ದಾರೆ.
ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0204/2024 ಕಲಂ 420 ಮತ್ತು 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಶ್ರೀ ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ - ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಶ್ರೀ ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಶ್ರೀ ನಾಗರಾಜ್ ಎಎಸ್ಐ, ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1)ಸರೋಜ ಕೆ, 49 ವರ್ಷ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಮತ್ತು 2) ಕು|| ತನ್ವಿ ಎಸ್.ಎಂ, 22 ವರ್ಷ, ರಾಯಲ್ ಆರ್ಕೇಡ್ ಹಿಂಭಾಗ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಇವರನ್ನುದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 27,000/- ರೂಗಳ 3 ಗ್ರಾಂ 470 ಮಿಲಿ ತೂಕದ 3 ಬಂಗಾರದ ಲಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.