ಕದಂಬ ಕನ್ನಡ ವೇದಿಕೆ ವತಿಯಿಂದ ಪಾಲಿಕೆ ಆಯುಕ್ತರಾದ ಡಾಕವಿತಾ ಯೋಗಪ್ಪ ನವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ವಿಶ್ವನಾಥ್ ರವರು ಶಿವಮೊಗ್ಗ ನಗರದಲ್ಲಿ ಜೊತೆಗೆ ಬೊಮ್ಮನಕಟ್ಟೆಯ ಎಲ್ಲಾ ವಾರ್ಡ್ ಗಳಲ್ಲೂ ಮೂಲಭೂತ ಸೌಕರ್ಯಗಳು ಹೆಚ್ಚಾಗಿದೆ.ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ, ನಗರೋತ್ಪನ್ನ-೯ ಹಣಕಾಸು ಯೋಜನೆ ಸೇರಿದಂತೆ ನಾನಾ ಕಡೆಯಿಂದ ಹಣ ಬಂದರೂ ಜನಪ್ರತಿನಿಧಿಗಳು ಬೇಜಾವಾಬ್ದಾರಿತನ ಮಾಡುತ್ತಿದ್ದಾರೆ ಎಂದರು.

ಶಿವಮೊಗ್ಗ ವಾರ್ಡ್ ನಂಬರ್-೧ರ ಬೊಮ್ಮನಕಟ್ಟೆ “ಬಿ” ಬ್ಲಾಕ್ ಮೈಲಮ್ಮ ದೇವಸ್ಥಾನದ ಎದುರು ರಸ್ತೆಗಳು, ತಿರುವುಗಳು ಇಂದಿಗೂ ಡ್ರೈನೇಜ್, ರಸ್ತೆಗಳಿಲ್ಲ.  ಬೊಮ್ಮನಕಟ್ಟೆಯಾ ನಿವಾಸಿಗಳು ಡೆಂಗಿ ಜ್ವರಕ್ಕೆ ತುತ್ತಾಗುವ ಮುನ್ನ ನೂತನ ಪಾಲಿಕೆ ಆಯುಕ್ತರು ಪರಿಶೀಲಿಸಿ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕನ್ನಡ ಕದಂಬ ವೇದಿಕೆ ಮುಖಂಡರುಗಳು ಮನವಿಯಲ್ಲಿ ವಿನಂತಿಸಿದ್ದಾರೆ.

ವರದಿ ಪ್ರಜಾ ಶಕ್ತಿ