ಬೆಂಗಳೂರಿನಲ್ಲಿ ನಡೆಯುತ್ತಿರುವ 153ನೇ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ರವರು ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ,ಪಟ್ಟಣ ಪಂಚಾಯಿತಿ ಸದಸ್ಯರಿಗೆ ಇರುವಂತಹ ಸೌಲಭ್ಯಗಳ ಬಗ್ಗೆ ಚರ್ಚಿಸಿ, ಪ್ರಸ್ತುತ
ನೀಡುತ್ತಿರುವ ಗೌರವಧನವನ್ನು ಹೆಚ್ಚಳ ಮಾಡುವ ಕುರಿತು ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರನ್ನು ಪ್ರಶ್ನಿಸಿ, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ಗೌರವಧನವನ್ನು ಹೆಚ್ಚಳ ಮಾಡಬಹುದೆಂದು ಸಲಹೆ ನೀಡಿದರು.

ಜೀವ ವಿಮಾ ಯೋಜನೆ ಕಲ್ಪಿಸಿ,ಆರೋಗ್ಯ ಸೌಲಭ್ಯವನ್ನು ಸದಸ್ಯರಿಗೆ ವಿಸ್ತರಿಸಿ, ತಮಗೆ ಹಾಗೂ ಕುಟುಂಬಸ್ಥರಿಗೆ ಸುರಕ್ಷತೆಯ ಭಾವನೆಯನ್ನು ಮೂಡಿಸಬೇಕೆಂದು ಮಾನ್ಯ ಶಾಸಕರು, ಸಚಿವರಲ್ಲಿ ಒತ್ತಾಯಿಸಿದರು.

ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ, ಉಪಾಧ್ಯಕ್ಷರ ಮೊದಲ ಆಡಳಿತ ಅವಧಿ ಹಲವು ತಿಂಗಳು ಕಳೆದರು ಇದುವರೆಗೂ ಮೀಸಲು ಪ್ರಕಟಗೊಳಿಸಿಲ್ಲದ ಕುರಿತು ಶೀಘ್ರವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಶಾಸಕರು,ಸಚಿವರಲ್ಲಿ ಒತ್ತಾಯಿಸಿದರು.

ವರದಿ ಪ್ರಜಾ ಶಕ್ತಿ