ರಾಷ್ಟ್ರಭಕ್ತರ ಬಳಗ ಶಿವಮೊಗ್ಗ ಇವರ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಮಣ್ಣ ಶೆಟ್ಟಿ ಪಾರ್ಕಿನಿಂದ ಗಾಂಧಿ ಬಜಾರ್ ನೆಹರು ರಸ್ತೆ ಮೂಲಕ ಗೋಪಿ ಸರ್ಕಲ್ ಬಂದು ತಲುಪಿತು. ಗೋಪಿ ಸರ್ಕಲ್ ನಲ್ಲಿ ಪ್ರತಿಭಟನೆ ಉದ್ದೇಶಿ ಮಾತನಾಡಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರ ಭಕ್ತರ ಬಳಗ ಸಂಚಾಲಕರಾದ ಮಾಜಿ ಉಪಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಗೋವಿಂದಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಮನೆಗಳನ್ನು 2017ರಲ್ಲಿ ಜನರಿಂದ ಹಣವನ್ನು ಕಟ್ಟಿಸಿಕೊಂಡು 7 ವರ್ಷ ಕಳೆದರೂ ಜನರಿಗೆ ಮನೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.ಈಗಾಗಲೇ ನಿರ್ಮಾಣವಾಗಿರುವ ಮನೆಗಳಿಗೆ ವಿದ್ಯುತ್, ನೀರು ಮತ್ತಿತರ ಮೂಲಬೂತ ಸೌಕರ್ಯಗಳನ್ನು ಓದಗಿಸಬೇಕಾಗಿ ಮನೆ ಫಲಾನುಭಗಳಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದಪುರ ನಿವಾಸಿ ಸಂಘಗಳ ಅಧ್ಯಕ್ಷರಾದ ಶಂಕರ್ ಗೌಡ ಅವರು ಗೋವಿಂದಪುರ ಬಡಾವಣೆಯಲ್ಲಿ ವಾಸವಿರುವ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್ ನೀರು ರಸ್ತೆಗಳು ಇಲ್ಲ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಗೋವಿಂದಪುರ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶಂಕರ್ ಗೌಡ ಮತ್ತು ಸಂಘದ ಸದಸ್ಯರುಗಳು ಬರವಣಿ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.