ಶಿವಮೊಗ್ಗ ನಗರವು ಹಸಿದವರಿಗೆ ಅನ್ನದಾಸೋಹದ ತೊಟ್ಟಿಲು ಆಗಿದೆ, ನಗರದ ಹಲವು ದೇವಾಲಯಗಳಲ್ಲಿ ಮಂಗಳಾರತಿಯ ನಂತರ ಪ್ರಸಾದ ತೀರ್ಥದ ಮೂಲಕ ಅನ್ನ ದಾಸೋಹ ನಡೆಯುತ್ತದೆ. ಬಡವ ಬಲ್ಲಿದರು, ದೀನದಲಿತರು, ಶ್ರೀಮಂತರು ಎನ್ನದೆ ಹೊಟ್ಟೆ ಹಸಿದ ಎಲ್ಲರೂ ಜಾತಿಭೇದ ಧರ್ಮ, ವರ್ಗವ ಮರೆತು “ತೀರ್ಥ ಪ್ರಸಾದ ಅನ್ನ ದಾಸೋಹಕ್ಕೆ” ಸಾಲುಗಟ್ಟಿ ನಿಲ್ಲುತ್ತಾರೆ.
ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚು ಸ್ಪೋಟಗೊಳ್ಳುತ್ತಿದೆ, ರಸ್ತೆ ಕಿರಿದಾಗಿ ಅಪಘಾತಗಳು ಹೆಚ್ಚುತ್ತಿದೆ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಬಡವರೆ ಹೆಚ್ಚು. ಅಪಘಾತದಲ್ಲಿ ಇವರ ಸಂಖ್ಯೆಯೇ ಹೆಚ್ಚಾಗಿದೆ. ಹಲವು ಅಪಘಾತದಿಂದ ಹಾಗೂ ನಾನಾ ಕಾಯಿಲೆಗಳಿಂದ ನರಳುವ ಹಣವಂತರು ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಹಣವಿಲ್ಲದ ಬಹಳಷ್ಟು ಬಡವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಶಾಂತಲಾ ಸ್ಪೈರೋಕ್ಯಾಸ್ಟ್ ಸಭಾಂಗಣದಲ್ಲಿ 20/7/2024ರ ಶನಿವಾರ ಸಂಜೆ ಶ್ರೀಯುತ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಕಡೆಯವರಿಗೆ “ಅನ್ನ ದಾಸೋಹದ” ಕಾರ್ಯಕ್ರಮ ಹಮ್ಮಿಕೊಳ್ಳಲು ನಗರದ ಆಸಕ್ತರ ಸಭೆ ಕರೆಯಲಾಗಿತ್ತು, ನಗರದ ಸಮಾಜ ಸೇವಕರು, ದಾನಿಗಳು, ನಿಸ್ವಾರ್ಥ ಸೇವಕರು ಇನ್ನು ಹಲವರು ಭಾಗಿಯಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಸದ್ಯದಲ್ಲಿಯೇ ಈ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಈ ಯೋಜನೆಯ ಸಂಚಾಲಕರಾದ ಶ್ರೀ ಟಿ ಆರ್ ಸತ್ಯನಾರಾಯಣ್, ಶ್ರೀಧರ್ ಕಾಮತ್, ಪ್ರಭಾಕರ್, ಸುರೇಶ್ ಕುಮಾರ್ ಶೆಟ್ಟಿ, ರುದ್ರೇಶ್ ತುಕಾರಾಂ, ಮೃತ್ಯುಂಜಯ, ತೀರ್ಥಪ್ಪ, ಭೀಮಣ್ಣ, ಶಶಿಭೂಷಣ್, ಚೂಡಾಮಣಿ ರಾವ್ ಪವಾರ್, ಮುರಳಿ, ಧನರಾಜ್, ಚನ್ನವೀರಪ್ಪ ಗಾಮನಗಟ್ಟಿ ರೂಪ ಚಂದ್ರಶೇಖರ್, ನೇತ್ರಾವತಿ ಹಾಗೂ ಇತರರು ಹಾಜರಿದ್ದರು.