“ಕಡಲ ಕಿನಾರೆಯ ಸಮ್ಮಿಶ್ರಣ – ಮಲೆನಾಡ ಸೊಬಗ ಹೊಂಗಿರಣ. ಇದುವೇ ನನ್ನ ಲೋಕಸಭಾ ಕ್ಷೇತ್ರ ಎಂಬುದು ಸುದೈವ”

ಬೆಂಗಳೂರಿನ ವಿಜಯನಗರದಲ್ಲಿರುವ ಜಿ.ಬಿ.ಬಿ ಕಲ್ಯಾಣ ಮಹಲ್ ಸಭಾಂಗಣದಲ್ಲಿ ಬಹು ವೈವಿಧ್ಯತೆಯೊಂದಿಗೆ ಹಮ್ಮಿಕೊಂಡಿದ್ದ ತುಳುನಾಡ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪುರಾತನ ಬಹುವಿಶೇಷ ಆಚರಣೆಯಾದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಚರಣೆಯೊಂದಿಗೆ ರಾಜಧಾನಿಯಲ್ಲಿ ನೆಲೆಸಿರುವ ಕಡಲ ತೀರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಪ್ರತಿಭಾ ಪುರಸ್ಕಾರ” ಮತ್ತು “ವಿದ್ಯಾರ್ಥಿ ವೇತನ” ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ದೇಶ ಮಾತನಾಡಿದ ಅವರು”ಆಟಿಡೊಂಜಿ” ಎಂಬ ಪದ ನಮಗೆ ಆಲಿಸಲು ವಿಶೇಷ ಎನಿಸಬಹುದು. ಆದರೆ ಆಟಿ ಎಂದರೆ ತುಳುನಾಡಿನ ಭಾಷೆಯಲ್ಲಿ “ಆಷಾಢ” ಎಂದು ಅರ್ಥ. ಕೃಷಿಯನ್ನು ಪ್ರಮುಖ ಚಟುವಟಿಕೆಯಾಗಿ ನಂಬಿ ಬದುಕುತ್ತಿರುವ ಬಹುಪಾಲು ಭೌಗೋಳಿಕ ಪ್ರದೇಶ ತುಳುನಾಡು. ಈ “ಆಟಿ” ತಿಂಗಳಲ್ಲಿ ವರ್ಷದ ಒಂದು ತಿಂಗಳು ವಿರಾಮ ತೆಗೆದುಕೊಳ್ಳುವುದು ಅವರ ಆಚರಣೆಯಲ್ಲಿ ರೂಡಿಯಲ್ಲಿದೆ ಎಂದು ತಿಳಿಸಿದರು.

ಈ ಅವಧಿಯಲ್ಲಿ ರೈತನು ತನ್ನ ನೆಲದ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ, ಸಂಗೀತ ಮತ್ತು ಮನರಂಜನೆಗಾಗಿ ಸಾಂಪ್ರದಾಯಿಕ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಹಾಗಾಗಿ “ಆಟಿ” ಸಾಂಸ್ಕೃತಿಕವಾಗಿ ಮಹತ್ವದ ಮಾಸವಾಗಿದೆ.

ಆಟಿಯ ಸಮಯದಲ್ಲಿ ಬಾಯಲ್ಲಿ ನೀರೂರಿಸುವ ಪೌಷ್ಟಿಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದು ನಮ್ಮ ದೇಹದ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ. ಇಷ್ಟೆ ಅಲ್ಲದೆ ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಇವರು ದುಷ್ಟರನ್ನು ಹಿಮ್ಮೆಟ್ಟಿಸಲು “ಆಟಿ ಕಳಂಜ” ನೃತವನ್ನು ಕೂಡ ಪ್ರದರ್ಶನ ಮಾಡಲಾಗುತ್ತದೆ.

ನನ್ನ ಲೋಕಸಭಾ ಕ್ಷೇತ್ರವು ತುಳುನಾಡಿನ ಹೆಬ್ಬಾಗಿಲು ಬೈಂದೂರು ಕೂಡ ಒಳಗೊಂಡಿರುವುದು ನನ್ನ ಸುದೈವ. ರಾಷ್ಟ್ರೀಯತೆ ಎಡೆಗಿನ ನಿಮ್ಮ ಬದ್ಧತೆ ಪ್ರಶ್ನಾರ್ಹ. ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲು ನಿಮ್ಮ ಬೆಂಬಲ ಅಪಾರ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನ್ನ ಪರಿಶ್ರಮ ನಿತ್ಯ ನಿರಂತರ ಎಂದು ಮತ್ತೊಮ್ಮೆ ವಾಗ್ದಾನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷರಾದ ಶ್ರೀ ದೀಪಕ್ ಶೆಟ್ಟಿ ಅವರು, ದೇವಾಡಿಗ ನವೋದಯ ಸಂಘದ ಅಧ್ಯಕ್ಷರಾದ ಶ್ರೀ ಹರಿ ಅವರು, ಪ್ರಮುಖರಾದ ಶ್ರೀ ಮಹಾಬಲ ಅವರು, ಶ್ರೀಮತಿ ಪ್ರಿಯದರ್ಶಿನಿ ಅವರು ಸೇರಿದಂತೆ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ