ಬಿಜೆಪಿ ಜೆಡಿಎಸ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಶಿವಪ್ಪ ನಾಯಕ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆಗೆ ಹೆದರಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅವರನ್ನು ಇಳಿಸಲು ಷಡ್ಯಂತ್ರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಲ್ಕಿಸ್ ಬಾನು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಈಗಾಗಲೇ ವಾಲ್ಮೀಕಿ ನಿಗಮದ ಹಗರಣ ತನಿಖೆಯ ಹಂತದಲ್ಲಿದೆ. ತಪ್ಪಿದಸ್ತರಿಗೆ ಶಿಕ್ಷೆಯಾಗಲಿದೆ .ಆದರೆ ಸಿದ್ದರಾಮಯ್ಯನವರ ಆಡಳಿತಕ್ಕೆ ಹೆದರಿ, ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ. ಮೊದಲು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ ಎಂದರು. ರೈಸ್ ಮಿಲ್ ಗುಮಾಸ್ತನಾದ ಯಡಿಯೂರಪ್ಪನವರ ಆಸ್ತಿ ಈಗ ಕೋಟ್ಯಾಂತರ ಆಗಿದೆ. ಅದು ದಲಿತರ ಹಿಂದುಳಿದವರ ಮತ್ತು ರಾಜ್ಯದ ದುರ್ಬಲ ವರ್ಗದವರ ಹಣ ಎಂದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೊಯ್ಗೊಂಬೆಯಾಗಿದ್ದು ಮುಖ್ಯಮಂತ್ರಿಯನ್ನು ಇಳಿಸಲು ಹೊರಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಸವಾಲು ಹಾಕಿದರು.
ಹಿಂದುಳಿದ ವರ್ಗಗಳ ನಾಯಕ ಕಲಗೋಡು ರತ್ನಾಕರ್ ಮಾತನಾಡಿ ಸಿದ್ದರಾಮಯ್ಯನವರನ್ನು ಮುಟ್ಟಲು ಹೋದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸೂಡ ಅಧ್ಯಕ್ಷ ಎಚ್ಎಸ್ ಸುಂದರೇಶ್ ಮಾತನಾಡಿ ಶಿವಮೊಗ್ಗದಲ್ಲೇ ಬಿಜೆಪಿಯ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆರ್ ಟಿ ಜಿ ಎಸ್ ಮೂಲಕ ಲಂಚ ಪಡೆದ ಬಿಜೆಪಿಗೆ ಕಾಂಗ್ರೆಸ್ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ವರಿಸುವ ಯಾವ ನೈತಿಕತೆಯೂ ಇಲ್ಲ ಎಂದರು. ಐಟಿ ಮತ್ತು ಇಡಿ ದಾಳಿ ನಡೆಸಿ ಕಾಂಗ್ರೆಸ್ ನಾಯಕರನ್ನು ಬಗ್ಗು ಬಡೆಯಲು ಯತ್ನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧವು ಕೂಡ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು
ಡಿಎಸ್ಎಸ್ ಮುಖಂಡ ಹಾಲೇಶಪ್ಪ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಕಾಮುಕರ ಪಾರ್ಟಿ. ಸ್ನೇಹಿತರ ಹೆಂಡತಿಯನ್ನು ಬಿಟ್ಟಿಲ್ಲ. ಜೆಡಿಎಸ್ ಮುಖಂಡರ ಮಕ್ಕಳು ಗಂಡು ಮಕ್ಕಳನ್ನು ಬಿಟ್ಟಿಲ್ಲ. ಅವರಿಗೆ ಸಿಎಂ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಸದನದಲ್ಲಿ ಬ್ಲೂ ಫಿಲಂ ನೋಡಿದವರು. ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಬಿಜೆಪಿಯವರ ಪಾಪದ ಕೃತ್ಯಗಳು ಶೀಘ್ರ ದಲ್ಲೇ ಬಯಲಾಗಲಿದೆ. ಬಿಜೆಪಿಯವರಿಗೆ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್ ಆಗಿದ್ದು ಅವರ ವಿರುದ್ಧದ ಯಾವುದೇ ಕುತಂತ್ರಕ್ಕೆ ಫಲ ನೀಡುವುದಿಲ್ಲ ಬದಲಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಬಣ್ಣ ಬಯಲಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಸೇರಿದ್ದರು ಟೈಯರ್ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್. ಪ್ರಮುಖರಾದ ಎಸ್ ಕೆ ಮರಿಯಪ್ಪ. ಕಲೀಮ್ ಪಾಷಾ ಅಲ್ತಾಫ್ ಪರ್ವೀಜ್ ಗಿರೀಶ್ ಜಿಡಿ ಮಂಜುನಾಥ್ , ಶರತ್ ಮರಿಯಪ್ಪ. ತಂಗರಾಜ್. ಚಾವಡಿ ಲೋಕೇಶ್. ಚಂದ್ರ ಭೂಪಾಲ್ ನಾಜೀವ ದೇವಿ ಕುಮಾರ್ ವಿಶ್ವನಾಥ್ ಕಾಶಿ ಡಾ. ಶ್ರೀನಿವಾಸ ಕರಿಯಣ್ಣ ಪಾಲಾಕ್ಷಿ. ರಂಗನಾಥ್ ರೇಖಾ ರಂಗನಾಥ್. ನವಲೆ ಮಂಜುನಾಥ್ ನಾಗರಾಜ್ ಕಂಕಾರಿ .ಸ್ಟೆಲ್ಲಾ ಮಾರ್ಟಿನ್. ನಾಜಿಮಾ ಮೊದಲಾದವರಿದ್ದರು.