ಶಿವಮೊಗ್ಗ ನಗರದ KSRTC ಬಸ್ ನಿಲ್ದಾಣ, ಲಕ್ಷರ್ ಮೊಹಲ್ಲಾ, ದ್ರೌಪದಮ್ಮ ವೃತ್ತ, ಮಹಾವೀರ ವೃತ್ತ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ಆಯನೂರು ಬಸ್ ನಿಲ್ದಾಣ, ಕೋಟೆ ರಸ್ತೆ, ಭದ್ರಾವತಿಯ ಹುತ್ತಾ ಕಾಲೋನಿ, ನೆಹರೂ ನಗರ, ಶಿವಾಜಿ ವೃತ್ತ, ಅಂಡರ್ ಬ್ರಿಡ್ಜ್, ಬಿ.ಆರ್.ಪಿ, ಬೊಮ್ಮನಕಟ್ಟೆ, ಹೊಸನಗರದ ಬಸ್ ನಿಲ್ದಾಣ, ನಗರದ ಕೋಟೆ, ರಿಪ್ಪನ್ ಪೇಟೆ ಟೌನ್, ಸಾಗರ ಟೌನ್ ನ ವಿನೋಬನಗರ, ಆನಂದಪುರದ ರಂಗನಾಥ ದೇವಸ್ಥಾನದ ಹತ್ತಿರ, ಶಿರಾಳಕೊಪ್ಪ ಬಸ್ ನಿಲ್ದಾಣ, ಸೊರಬದ ಬಸ್ ಸ್ಟಾಂಡ್ ವೃತ್ತ ಮತ್ತು ಆನವಟ್ಟಿ ಟೌನ್ ನಲ್ಲಿ ಶಿವಮೊಗ್ಗ-ಎ, ಶಿವಮೊಗ್ಗ-ಬಿ , ಸಾಗರ, ತೀರ್ಥಹಳ್ಳಿ, ಶಿಕಾರಿಪುರ ಮತ್ತು ಭದ್ರಾವತಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದು ಕೊರತೆಯನ್ನು ಆಲಿಸಲಾಗಿರುತ್ತದೆ.

ವರದಿ ಪ್ರಜಾ ಶಕ್ತಿ