ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದ ಆವರಣದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧಿಕ್ಷಕರು ಶಿವಮೊಗ್ಗ ಬಿ ಉಪ ವಿಭಾಗ ಮತ್ತು ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ ಎ ಉಪ ವಿಭಾಗರವರು ಶಿವಮೊಗ್ಗ ನಗರದ ರೌಡಿ ಆಸಾಮಿಗಳ ಪರೇಡ್ ನಡೆಸಿದ್ದು, ರೌಡಿ ಪರೇಡ್ ನಲ್ಲಿ ಶಿವಮೊಗ್ಗ ನಗರದ ಒಟ್ಟು 110 ಜನ ರೌಡಿ ಆಸಾಮಿಗಳು ಹಾಜರಿದ್ದರು ಮತ್ತು ರೌಡಿ ಪರೇಡ್ ನಲ್ಲಿ ಹಾಜರಿದ್ದ ರೌಡಿ ಆಸಾಮಿಗಳ ಹಾಲೀ ವಿಳಾಸ, ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಬಗ್ಗೆ ಪರಿಶಿಲನೆ ನಡೆಸಿ ಈ ಕೆಳಕಂಡ ಎಚ್ಚರಿಕೆ ನೀಡಿದರು.

1) ವಾರದಲ್ಲಿ 02 ಬಾರಿ ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಹಾಜರಾತಿ ನೀಡುವುದು.

2) ನಿಮ್ಮ ಚಟುವಟಿಕೆ ಮತ್ತು ಚಲನ ವಲನಗಳ ಮೇಲೆ ನಿಗಾ ಇಡಲಾಗಿದ್ದು, ಒಂದು ವೇಳೆ ಯಾವುದಾದರೂ ಕಾನೂನು ಬಾಹೀರ ಚಟುವಟಿಕೆ ಮತ್ತು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ, ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.

3) ನಿಮ್ಮ ಆದಾಯದ ಮೂಲ ಮತ್ತು ಸ್ನೇಹಿತರ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುವುದು, ಒಂದು ವೇಳೆ ನೀವು ಸ್ನೇಹಿತರನ್ನು ಸೇರಿಸಿಕೊಂಡು ಗುಂಪು ಕಟ್ಟಿಕೊಂಡು ಅಡ್ಡಗಳನ್ನು ಮಾಡಿಕೊಳ್ಳುವುದು, ರಾತ್ರಿ ವೇಳೆ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.

4) ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು, ಶಿಸ್ತಾಗಿ ಕಾಣುವಂತಹ ಉಡುಪುಗಳನ್ನು ಧರಿಸಿ ಮತ್ತು ಕಾನೂನನ್ನು ಗೌರವಿಸಿ ಹಾಗೂ ಕಾನೂನನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವಿಸಿ ಇದು ನಿಮಗೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಪೊಲೀಸ್ ಇಲಾಖೆಯು ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ ಎಂದು ಎಚ್ಚರಿಕೆ ನೀಡಿರುತ್ತಾರೆ.

ವರದಿ ಪ್ರಜಾ ಶಕ್ತಿ