ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಿವಮೊಗ್ಗ ಎ ಉಪ ವಿಭಾಗದಲ್ಲಿ ಶ್ರೀ ಅನಿಲ್ ಕುಮಾರ್ ಭೂಮ ರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶ್ರೀ ರವಿ ಪಾಟೀಲ್ ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ರವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ, ಭದ್ರಾವತಿ ಉಪ ವಿಭಾಗದಲ್ಲಿ ಶ್ರೀ ನಾಗರಾಜ್ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ರವರ ನೇತೃತ್ವದಲ್ಲಿ ಶ್ರೀ ಜಗದೀಶ್ ಹಂಚಿನಾಳ್ ಪಿ.ಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಶ್ರೀ ರಮೇಶ್ ಪೊಲೀಸ್ ಉಪ ನಿರೀಕ್ಷಕರು, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ರವರು ಬಂಡಾರಳ್ಳಿ ಗ್ರಾಮದಲ್ಲಿ, ಸಾಗರ ಉಪ ವಿಭಾಗದಲ್ಲಿ ಶ್ರೀ ಮಹಾಬಲೇಶ್, ಪೊಲೀಸ್ ನಿರೀಕ್ಷಕರು, ಸಾಗರ ಟೌನ್ ಪೊಲೀಸ್ ಠಾಣೆ ರವರು ಆವಿನಹಳ್ಳಿ ಗ್ರಾಮದಲ್ಲಿ, ಶ್ರೀ ಸೀತಾರಾಮ್ ಪೊಲೀಸ್ ನಿರೀಕ್ಷಕರು ಸಾಗರ ಟೌನ್ ಪೊಲೀಸ್ ಠಾಣೆ ರವರು ಸಾಗರ ಟೌನ್ ಮಾರುಕಟ್ಟೆ ರಸ್ತೆಯಲ್ಲಿ, ಶ್ರೀ ಯುವರಾಜ್ ಪೊಲೀಸ್ ಉಪ ನಿರೀಕ್ಷಕರು ಆನಂದಪುರ ಪೊಲೀಸ್ ಠಾಣೆ ರವರು ಆನಂದಪುರ ಟೌನ್ ನಲ್ಲಿ, ಶಿಕಾರಿಪುರ ಉಪ ವಿಭಾಗದಲ್ಲಿ ಶ್ರೀ ರಾಜು ರೆಡ್ಡಿ ಬೆನ್ನೂರು ಪೋಲಿಸ್ ಉಪನಿರೀಕ್ಷಕರು ಆನವಟ್ಟಿ ಪೊಲೀಸ್ ಠಾಣೆ ರವರು ಕಮನವಳ್ಳಿ ಗ್ರಾಮದಲ್ಲಿ ಗಣೇಶ ಪ್ರತಿಷ್ಟಾಪನಾ ಸಮಿತಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರ ಸಭೆಯನ್ನು ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಗಣಪತಿ ಮೂರ್ತಿ ಪ್ರತಿಷ್ಟಾನೆಯ ದಿನಾಂಕ, ಸ್ಥಳ, ಮೆರವಣಿಗೆ ಮಾರ್ಗ ಮತ್ತು ವಿಸರ್ಜನೆ ಸ್ಥಳದ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸ್ ಠಾಣೆಗೆ ನೀಡುವುದು.

2) ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ದಕ್ಕೆಯಾಗದಂತೆ ಗಣಪತಿ ಪೆಂಡಾಲ್ ಗಳನ್ನು ಹಾಕಬೇಕು.

3) ಈದ್ ಮಿಲಾದ್ ಮತ್ತು ಗಣಪತಿ ಮೆರವಣಿಗೆಯಲ್ಲಿ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದ ರೀತಿ ಮೆರವಣಿಗೆ ಮಾಡುವುದು.

4) ಗಣಪತಿ ಪೆಂಡಾಲ್ ಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿ, ಗಣಪತಿ ಮೂರ್ತಿಗಳು ವಿಸರ್ಜನೆಯಾಗುವ ದಿನದ ವರೆಗೆ, ದಿನದ 24 ಗಂಟೆಯೂ ಪೆಂಡಾಲ್ ನಲ್ಲಿ ಇರುವ ಹಾಗೇ ನೋಡಿಕೊಳ್ಳಬೇಕು.

5) ಹಬ್ಬದ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕುವಾಗ ಇತರರ ಭಾವನೆಗಳಿಗೆ ದಕ್ಕೆಯಾಗದ ರೀತಿಯಲ್ಲಿ ಅಳವಡಿಸುವುದು.

6) ಹಬ್ಬದ ಆಚರಣೆಯಲ್ಲಿ ದ್ವನಿ ವರ್ಧಕಗಳನ್ನು ಬಳಕೆ ಮಾಡುವಾಗ, ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ ಬಳಸುವುದು.

7) ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಆಯಾ ಗಣೇಶ ಮೂರ್ತಿಗಳ ಪ್ರತಿಷ್ಟಾಪನಾ ಮಂಡಳಿ ಮತ್ತು ಈದ್ ಮಿಲಾದ್ ಸಮಿತಿಯ ಸದಸ್ಯರು ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ