ಶಿವಮೊಗ್ಗ ವಿನೋಬ ನಗರದ ಸೂಡ ಕಚೇರಿಯು ಭೂಕಬಳಿಕೆ ಕಾಯ್ದೆಯನ್ನ ಉಲ್ಲಂಘಿಸಿ ಶೆಡ್ ಕಟ್ಟಲಾಗಿದೆ ಎಂದು ಶಿವಮೊಗ್ಗ ಹಿತರಕ್ಷಣ ವೇದಿಕೆಗಳ ಒಕ್ಕೂಟ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿದ ಹಿತರಕ್ಷಣಾ ವೇದಿಕೆ ಒಕ್ಕೂಟ ರಸ್ತೆ ಇದೆ ಎಂದು 40 ವರ್ಷಗಳಿಂದ ಬಳಕೆ ಆಗುತ್ತಿದೆ. ಇದು ಪಾಲಿಕೆ ರಸ್ತೆಯಾಗಿದೆ ಎಂದು ಹೇಳಿದೆ. ಪಾಲಿಕೆ ಎರಡು ಪತ್ರ ಬರೆದರೂ ಶೆಡ್ ತೆರವುಗೊಳಿಸಿಲ್ಲ. ಆ.28 ರಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

3 ತಿಂಗಳಿಂದ ವೇದಿಕೆ ಹೋರಾಟ ಮಾಡುತ್ತಿದೆ. ಪಾಲಿಕೆಯು ಸಾರ್ವಜನಿಕರ ರಸ್ತೆ ಎಂದು ಹೇಳುತ್ತಿದೆ. 1000 ಸಾವಿರ ವಾಹನಗಳು, 5000 ಪಾದಚಾರಿಗಳು ಓಡಾಡುತ್ತಾರೆ. ವ್ಯಾಪಾರಸ್ಥರಿಗೆ ಈ ಶೆಡ್ ನಿರ್ಮಾಣದಿಂದ ತೊಂದರೆಯಾಗಿದೆ ಎಂದರು.

ಶಾಸಕರು ಸೂಡಾ ಸಭೆಯಲ್ಲಿ ಉಲ್ಲೇಖಿಸಿದ್ದಾರೆ.ಡಿಸಿ ಸಹ ತೆರವಿಗೆ ಸೂಚಿಸಿದರೂ ತೆರವುಗೊಳಿಸಿಲ್ಲ. ಒಂದುವಾರದ ಒಳಗೆ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು. 

ಕೆಲ ಸಂಘಟನೆಗಳು ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿದಿವೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ವೇದಿಕೆಯ ವಸಂತ್ ಕುಮಾರ್ ರಸ್ತೆಯಿಂದ ತೊಂದರೆಯಾದರೆ ಕಾನೂನು ಕ್ರಮ ಜರುಗುಸಿ ಹಾಗಂತ ರಸ್ತೆ ಇರುವ ಪ್ಲಾನ್ ಮೇಲೆ ಶೆಡ್ ನಿರ್ಮಿಸುವುದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಸಂತಕುಮಾರ್ ಡಾ.ಸತೀಶ್ ಕುಮಾರ್ ಶೆಟ್ಟಿ, ಚನ್ನವೀರಪ್ಪ ಗಾಮನಗಟ್ಟಿ, ಗೋಪಾಲ್, ವಿನೋದ್ ಪೈ, ಇಕ್ಬಾಲ್ ನೇತಾಜಿ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ