ಶ್ರೀಮತಿ ಸ್ವಪ್ನ, ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಚೆನ್ನಮ್ಮ ಪಡೆ ಉಸ್ತುವಾರಿ ಅಧಿಕಾರಿ ರವರು ಶಿವಮೊಗ್ಗ ನಗರದ SIMS ಮೆಡಿಕಲ್ ಕಾಲೇಜಿನಲ್ಲಿ ಮಹಿಳಾ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ವಿಧ್ಯಾರ್ಥಿನಿಯರಿಗೆ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.

1) ಸಾಮಾಜಿಕ ಜಾಲತಾಣ / ಆನ್ ಲೈನ್ ನಲ್ಲಿ ಬೇರೆಯವರೊಂದಿಗೆ ನಿಮ್ಮ ಖಾಸಗಿ ವಿಚಾರ / ಫೋಟೋಗಳನ್ನು ಹಂಚಿಕೊಳ್ಳಬೇಡಿ, ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾದ್ಯತೆ ಇರುತ್ತದೆ.

2) ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು / ವಿಧ್ಯಾವಂತರೇ ವಂಚನೆಗೆ ಒಳಗಾಗುತ್ತಿದ್ದು, ಫೇಸ್ ಬುಕ್, ಇನ್ಸ್ಟಾಗ್ರಾಮ್ ಇತರೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಾಗ ಎಚ್ಚರಿಕೆವಹಿಸಿ.

3) ಸಾರ್ವಜನಿಕ ಸ್ಥಳ / ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆ, ಉಪಟಳ, ಕಿರಿಕಿರಿ ನೀಡುವವರಿದ್ದರೆ ಕೂಡಲೇ 112 ಸಹಾಯವಾಣಿ / ಚೆನ್ನಮ್ಮ ಪಡೆಗೆ ಮಾಹಿತಿ ನೀಡಿ ತೊಂದರೆ ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

4) ಕಾನೂನಿನಲ್ಲಿ ಮಹಿಳೆ ಹಾಗೂ ಮಕ್ಕಳಿಗಿರುವ ವಿಶೇಷ ಹಕ್ಕುಗಳ ಬಗ್ಗೆ ಮತ್ತು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನೀಷೇಧ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.

ಕಾನೂನನ್ನು ಪಾಲಿಸಿ, ಕಾನೂನನ್ನು ಗೌರವಿಸಿ ಆಗ ಕಾನೂನು ನಿಮ್ಮನ್ನು ರಕ್ಷಿಸುತ್ತದೆ, ನಿಮ್ಮ ಸುರಕ್ಷತೆ ನಮ್ಮ ಹೊಣೆ.ಈ ಸಂದರ್ಭದಲ್ಲಿ ಚೆನ್ನಮ್ಮ ಪಡೆಯ ಪೊಲೀಸ್ ಅಧಿಕಾರಿ, ಸಿಬ್ಬಂಧಿಗಳು ಹಾಗೂ SIMS ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ