ಶಿವಮೊಗ್ಗ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಆ.28 ರಂದು ಅಫಿನಿಟಿ – 70 ಜಿ ಮತ್ತು ಅಲ್ಟಾçಸೌಂಡ್ ಯಂತ್ರಗಳನ್ನು ಉದ್ಘಾಟಿಸಲಾಗಿದ್ದು, ಅಫಿನಿಟಿ-70ಜಿ ಯಂತ್ರದಿAದ ಯಕೃತ್(ಲಿವರ್)ನಲ್ಲಿ ಕಂಡು ಬರುವ ಅತೀ ಸೂಕ್ಷö್ಮ ರೋಗಳಗಳನ್ನ ಮತ್ತು ಮೂತ್ರಪಿಂಡದ ಖಾಯಿಲೆಯನ್ನು ಮೊದಲ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.
2007 ರಿಂದ ರೇಡಿಯೋ-ಡಯೋಗ್ನೊಸಿಸ್ ವಿಭಾಗದಲ್ಲಿ ಎಕ್ಸ್ರೇ, ಸಿಟಿ ಸ್ಕಾö್ಯನ್, ಎಂಆರ್‌ಐ, ಅಲ್ಟಾçಸೌಂಡ್ ಸೇವೆಗಳನ್ನು ರೋಗಿಗಳಿಗೆ ಒದಗಿಸಲಾಗುತ್ತಿದೆ. ರೇಡಿಯೋ ಡಯೋಗ್ನೊಸಿಸ್ ವಿಭಾಗದಲ್ಲಿ ಉನ್ನತ ಎಕ್ಸ್-ರೇ ಮಷೀನ್‌ಗಳು, ಅಲ್ಟಾçಸೌಂಡ್ ಮಷೀನ್ಸ್, ಸಿಟಿ ಮಷೀನ್‌ಗಳು 4, ಎಂಆರ್‌ಐ ಯಂತ್ರಗಳು ಲಭ್ಯವಿರುತ್ತವೆ.
ಈ ಸೌಲಭ್ಯದಿಂದ ರೋಗಿಗಳಿಗೆ ಸಕಾಲದಲ್ಲಿ ವರದಿಯನ್ನು ನೀಡಲು ಸಾಧ್ಯವಾಗುತ್ತಿದೆ.
ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವೀಧರರಿಗೆ ಹಾಗೂ ಕಲಿಕಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ತರಬೇತಿಯನ್ನು ನೀಡುವ ಗುರಿ ಹೊಂದಲಾಗಿದೆ. ಒಂದು ದಿನಕ್ಕೆ 100 ರಿಂದ 120 ಅಲ್ಟಾçಸೌಂಡ್ ಸ್ಕಾö್ಯನಿಂಗ್ ಮತ್ತು 125 ರಿಂದ 130 ಸಿಟಿ ಹಾಗೂ 20 ರಿಂದ 25 ಎಂಆರ್‌ಐ ಸೇವೆಯನ್ನು ನೀಡಲಾಗುತ್ತಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು/ಡೀನ್ ಡಾ ವಿರುಪಾಕ್ಷರವರು ತಿಳಿಸಿದ್ದಾರೆ.