ಕುವೆಂಪು ರಸ್ತೆಯಲ್ಲಿರುವ ಪದವೀಧರ ಸಹಕಾರ ಸಂಘ ನಿಯಮಿತ ವತಿಯಿಂದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ನಾಳೆ ಸೆಪ್ಟಂಬರ್ 21ರಂದು ನಗರದ ಸರ್ಜಿ ಕನ್ವೆನ್ಷನಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಸ್ ಪಿ ದಿನೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರಾದ ಎಸ್ಪಿ ದಿನೇಶ್, ಶಿವಮೊಗ್ಗ ನಗರದ ಪ್ರತಿಷ್ಠಿತ ಸಹಕಾರ ಸಂಘವಾಗಿರುವ ನಮ್ಮ ಸಂಘವು ಸುಮಾರು 53 ವರ್ಷಗಳ ಹಿಂದೆ ಶಿವಮೊಗ್ಗ ನಗರದ ಪದವೀಧರರ ಶಿಕ್ಷಕರು, ವರ್ತಕರು, ವಕೀಲರು, ವೃತ್ತಿ ಬಾಂಧವರುಗಳೆಲ್ಲರೂ ಸೇರಿ ಮೈಸೂರಿನ ದಿ. ಗ್ರಾಜುಯೇಟ್ ಕೋ-ಆಪ್ ಬ್ಯಾಂಕಿಗೆ ಭೇಟಿ ನೀಡಿ. ಆ ಸಂಸ್ಥೆಯ ವ್ಯವಹಾರವನ್ನು ಅಧ್ಯಯಿನಿಸಿ, ಶಿವಮೊಗ್ಗ ನಗರದಲ್ಲೊಂದು ಇಂತಹ ಸಹಕಾರ ಸಂಘ ಪ್ರಾರಂಭಿಸುವುದರಿಂದ ಎಲ್ಲಾ ಪದವೀಧರರಿಗೆ ಸಹಕಾರವಾಗಿದೆ ಎಂದರು.
ನಗರದ ಡಿ.ವಿ.ಎಸ್. ಸಂಸ್ಥೆಯ ಒಂದು ಸಣ್ಣ ಕೊಠಡಿಯಲ್ಲಿ 1971 ಸೆಪ್ಟೆಂಬರ್ 27 ರಂದು ಪ್ರಾರಂಭಿಸಿ, ಯಶಸ್ವಿಯಾಗಿ 53 ವರ್ಷ ಪೂರೈಸಿ, ರಾಜ್ಯ ಮತ್ತು ಜಿಲ್ಲಾ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಪಡೆಯುವುದರೊಂದಿಗೆ ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು. ಸಂಘದ ಪ್ರಾರಂಭದಲ್ಲಿ ರುದ್ರಪ್ಪನವರು ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತೆ ಸಮಸ್ತ ಆಡಳಿತ ಮಂಡಳಿಗೆ ಧನ್ಯವಾದಗಳು ಎಂದರು.
ಸಂಘವು ಪ್ರಾರಂಭದಲ್ಲಿ ಕೇವಲ 163 ಸದಸ್ಯರಿಂದ ರೂ. 8276-00ಗಳ ಷೇರು ಬಂಡವಾಳದೊಂದಿಗೆ ರೂ.1001-00 ಠೇವಣಿ ಸಂಗ್ರಹಣೆ, ಹಾಗೂ 5400-00 ರೂ.ಗಳ ಸಾಲ 34-00 ರೂ.ಗಳ ನಿವ್ವಳ, ಲಾಭಗಳನ್ನ ಗಳಿಸಿರುತ್ತದೆ. ಈ ಅಂಕಿ ಅಂಶಗಳನ್ನ ಇಂದಿನ ಅಂದರೆ 2024ರ ಮಾರ್ಚಿಗೆ ಹೋಲಿಸಿದರೆ ಸದಸ್ಯರ ಸಂಖ್ಯೆ 7081 ಆಗಿದೆ.
288.82 ಲಕ್ಷಗಳ ಷೇರು ಬಂಡವಾಳ ಹೊಂದಿದೆ. 65.48 ಕೋಟಿಗಳ ನಿವ್ವಳ ಠೇವಣಿ ಸಂಗ್ರಹಿಸಿ 54.73 ಕೋಟಿ ರೂ.ಗಳ ಸಾಲ ನೀಡುವುದರೊಂದಿಗೆ 214.49 ಕೋಟಿ ವಹಿವಾಟು ನಡೆದಿದೆ. ರೂ. 7:41 ಕೋಟಿ ರೂಗಳ ಒಟ್ಟು ಆದಾಯ ಗಳಿಸಿದೆ. 1,29,16,136-25 ಗಳ ದಾಖಲೆ ನಿವ್ವಳ ಲಾಭವನ್ನ ಗಳಿಸಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯು ಅತ್ಯುತ್ತಮವಾಗಿದ್ದು, NPA ಪ್ರಮಾಣವು ಶೇಕಡ .5 ರಷ್ಟಿಸುತ್ತವೆ. ಇವಲ್ಲದೆ ಸತತವಾಗಿ ಕಳೆದ 6 ವರ್ಷಗಳಿಂದ ರೂ. 1 ಕೋಟಿಗೂ ಅಧಿಕ ಲಾಭವನ್ನು ಗಳಿಸಿದೆ ಎಂದರು. ಕಾರ್ಯಕ್ರಮಕ್ಕೆ ಮಿತ್ರರು ಆಗಮಿಸಿ ಸಮಾರಂಭ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ವಿನಂತಿಸಿದರು.