ನಗರದ ರಾಜರಾಜೇಶ್ವರಿ ಪ್ರೌಢಶಾಲೆ ಗೋಪಾಳದಲ್ಲಿ ಶನಿವಾರ ನೆಹರು ಯುವ ಕೇಂದ್ರ, ಮುಖಾ ಮುಖಿ ಎಸ್.ಟಿ ರಂಗ ತಂಡ ವತಿಯಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಪ್ರಯುಕ್ತ ಗೋಪಾಳ ವೃತ್ತ ಮತ್ತು ಬಸ್ಟ್ಯಾಂಡ್ ಸುತ್ತಮುತ್ತ ಜಾಗವನ್ನು ಸ್ವಚ್ಛಗೊಳಿಸುವ ಮೂಲಕ ನಡೆಸಲಾಯಿತು.


ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಷ್ಟ್ರದ್ಯಾಂತ ಸ್ವಚ್ಛ ಭಾರತ್ ಮಿಷನ್- ನಯಾ ಸಂಕಲ್ಪದ ಯೋಜನೆಯಲ್ಲಿ ಸ್ವಭಾವ್ ಸ್ವಚ್ಛತಾ, ಸಂಸ್ಕಾರ್ ಸ್ವಚ್ಛತವನ್ನು ಸೆಪ್ಟೆಂಬರ್ 17 ರಿಂದ 2ನೇ ಅಕ್ಟೋಬರ್ 2024 ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಮುಖಾ ಮುಖಿ ಎಸ್. ಟಿ ರಂಗ ತಂಡ (ರಿ )ಶಿವಮೊಗ್ಗ, ರಾಜರಾಜೇಶ್ವರಿ ಪ್ರೌಢಶಾಲೆ,ಗೋಪಾಳ ಇವರ ಸಹಯೋಗದೊಂದಿಗೆ ” ಸ್ವಚ್ಛತ ಹೀ ಸೇವಾ ” ಕಾರ್ಯಕ್ರಮವನ್ನು ನಡೆಸಲಾಯಿತು.


ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಯಾದ ಕೆ.ಜಿ ವೆಂಕಟೇಶ್ ರವರು ಮಹಾತ್ಮ ಗಾಂಧೀಜಿ ಕಂಡ ಸ್ವಚ್ಛತಾ ಸಂಕಲ್ಪದ ಬಗ್ಗೆ ಸ್ವಚ್ಛತಾ ಅಭಿಯಾನದ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಜಾಗೃತಿಗೊಳಿಸುವುದಕ್ಕೆ ನಾವು ನಿರಂತರವಾಗಿ ಕೈಜೋಡಿಸಿ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಅವರು ಸ್ವಚ್ಛತೆಯ ಸಂದೇಶವನ್ನು,ವಿದ್ಯಾರ್ಥಿಗಳಿಗೆ ಭೋಧಿಸಿದರು.


ಈ ಸಂದರ್ಭದಲ್ಲಿ ರಾಜರಾಜೇಶ್ವರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಧನಂಜಯ ಜೆ.ಆರ್, ಮತ್ತು ಶಿಕ್ಷಕ ವೃಂದದವರು, ಮುಖಾಮುಖಿ ಎಸ್ ಟಿ ರಂಗ ತಂಡದ ಮಂಜು ರಂಗಾಯಣ, ಮಹೇಂದ್ರ, ಆಶಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ