ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ 26ರ ಗುರುವಾರ  ಶ್ರೀ ವಿ.ಸೋಮಣ್ಣನವರು, ರಾಜ್ಯ ರೈಲ್ವೆ ಸಚಿವರಿಗೆ ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆ ಒಕ್ಕೂಟದಿಂದ ಮನವಿ ಸಲ್ಲಿಸಿದರು.ಕ್ರಿಯಾಶೀಲ ವ್ಯಕ್ತಿಯಾಗಿ ರಾಜ್ಯ ರೈಲ್ವೆ ಸಚಿವರಾಗಿರುವುದು ಕರ್ನಾಟಕದ ಹೆಮ್ಮೆ ಎಂದರು.ತಮ್ಮ ಅಧಿಕಾರಾವಧಿಯಲ್ಲಿ ನಮ್ಮ ರಾಜ್ಯದಲ್ಲಿಯ ಆಪೂರ್ಣಗೊಂಡಿರುವ ಹಲವಾರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುವುದರ ಮೂಲಕ ಸದರಿ ಯೋಜನೆಗಳು ಸಂಪೂರ್ಣಗೊಳಿಸಿ ಎಂದು ವಿನಂತಿಸಿದರು.

1) ಶಿವಮೊಗ್ಗ-ಬೀರೂರು ಮಾರ್ಗದ ಡಬ್ಲಿಂಗ್ ಕಾರ್ಯಕ್ಕೆ ಈ ಹಿಂದೆಯೇ ಅನುಮೋದನೆ ಸಿಕ್ಕಿತ್ತು. ಆದರೆ ಈ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದೆ. ಈ ಮಾರ್ಗದಲ್ಲಿ ಪ್ರತಿದಿನ ಸರಿಸುಮಾರು 12 ರೈಲುಗಳು ಹೋಗಿ ಬರುತ್ತವೆ (24 ಟ್ರಿಪ್) ಈ ಕಾರಣದಿಂದ ಪ್ರಯಾಣದ ಅವಧಿ ಹೆಚ್ಚುತ್ತಿದ್ದು, ಈ ಮಾರ್ಗದ ಡಬ್ಲಿಂಗ್ ಆದಲ್ಲಿ ಪ್ರಯಾಣದ ಸಮಯದಲ್ಲಿ ಉಳಿತಾಯವಾಗುತ್ತದೆ. ಇದಲ್ಲದೆ. ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು ಮಾರ್ಗ ಅಭಿವೃದ್ಧಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೈಲುಗಳು ಸಂಚರಿಸುವುದರಿಂದ ಈ ಮಾರ್ಗದ ಡಬ್ಲಿಂಗ್ ಅನಿವಾರ್ಯ ಆಗಲಿದೆ. ಆದ್ದರಿಂದ ಈ ಮಾರ್ಗದ ಡಬ್ಲಿಂಗ್ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಕೇಳಿಕೊಂಡರು.

2)ಶಿವಮೊಗ್ಗ-ಯಶವಂತಪುರ ಮಧ್ಯೆ ವಾರದಲ್ಲಿ 3 ದಿನ ಸಂಚರಿಸುವ ರಾತ್ರಿ ರೈಲ್ ನಂ.16581/ 16582 ಸೇವೆಯನ್ನು ಪ್ರತಿದಿನಕ್ಕೆ ವಿಸ್ತರಿಸುವುದು ಅತಿ ಜರೂರಾಗಿ ಜಾರಿಗೆ ಬರಬೇಕಾಗಿದೆ. ಕಾರಣ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಿಂದ ಪ್ರತಿದಿನ ಬೆಂಗಳೂರಿಗೆ ಪ್ರಯಾಣ ಮಾಡುವವರ ಸಂಖ್ಯೆ ಅತ್ಯಧಿಕಾಳವಾಗಿದ್ದು, ಈ ರೈಲಿಗಾಗಿ ನಾವು ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದು, ಜಾರಿಗೆ ಬರಲು ಬಾಕಿ ಇದೆ. ತಾವು ಈ ಬಗ್ಗೆ ಗಮನ ಹರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಈ ರೈಲು ಸೇವೆಯನ್ನು ಕಲ್ಪಿಸಬೇಕಾಗಿ ವಿನಂತಿಸುತ್ತೇವೆ ಎಂದರು.

3) ಪ್ರಸ್ತುತ ಶಿವಮೊಗ್ಗ-ರೇಣುಗುಂಟ-ಚೆನ್ನೈ ವಾರದಲ್ಲಿ 2 ದಿನ ಸಂಚರಿಸುತ್ತಿದ್ದ ವಿಷೇಶ ರೈಲು ಸಂಖ್ಯೆ.06223/06224 ನಿಲುಗಡೆಯಾಗಿ ತಿರುಪತಿ ಯಾತ್ರಿಗಳಿಗೆ ಅತೀವ ತೊಂದರೆಯಾಗಿದೆ. ಈ ರೈಲು ಸೇವೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತಾವು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.ಬಿ.ಎಸ್.ಯಡಿಯೂರಪ್ಪ ನವರು, ಮಾಜಿ ಮುಖ್ಯ ಮಂತ್ರಿಗಳು ಮಾನ್ಯ ಅಶ್ವಿನಿ ವೈಷ್ಣವ್, ಗೌರವಾನ್ವಿತ ಕೇಂದ್ರ ರೈಲ್ವೇ ಸಚಿವರು ಇವರಿಗೆ ಪತ್ರ ಸಂಖ್ಯೆ.04/ಡಿಇಎಲ್/2024 ದಿನಾಂಕ:17-02-2024 ರ ಮೂಲಕ ಮನವಿ ಸಲ್ಲಿಸಿದ್ದರೂ ಸಹಾ ಇನ್ನೂ ಜಾರಿಗೆ ಬಂದಿಲ್ಲ.

4) ಪ್ರಸ್ತುತ ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳೆಗ್ಗೆ 4.00 ಗಂಟೆಗೆ ಹೋಗುತ್ತಿದ್ದ ನಂ.16568 ಪ್ಯಾಸಿಂಜರ್ ರೈಲು ತುಮಕೂರಿನವರೆಗೆ ಮಾತ್ರ ಸಂಚರಿಸುತ್ತಿದೆ. ಈ ರೈಲನ್ನು ಎಂದಿನಂತೆ ಬೆಂಗಳೂರಿನವರೆಗೆ ವಿಸ್ತರಿಸಲು ತಾವು ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಂಡರು.

5) ನಂತರ ಪ್ರತಿದಿನ ತಾಳಗೊಪ್ಪ-ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲು ನಂ.20652 ಬೆಳೆಗ್ಗೆ 7.05 `ಕ್ಕೆ ಶಿವಮೊಗ್ಗದಿಂದ ಹೊದ ನಂತರ ಬೆಂಗಳೂರಿಗೆ ಮಧ್ಯಾಹ್ನ 1.10 ರವರೆಗೆ ಯಾವುದೇ ರೈಲು ಸೇವೆ ಇರುವುದಿಲ್ಲ. ಆದ್ದರಿಂದ ಬೆಳೆಗ್ಗೆ 6-00 ಕ್ಕೆ ತಾಳಗೊಪ್ಪ- ಶಿವಮೊಗ್ಗ-ಮೈಸೂರು ಇಂಟರ್ ಸಿಟಿ (ಕುವೆಂಪು ಎಕ್ಸ್‌ ಪ್ರೆಸ್) ರೈಲು ನಂ.16221/16222 ರ ವೇಳಾಪಟ್ಟಿಯನ್ನು ತಾಳಗೊಪ್ಪವನ್ನು ಬೆಳೆಗ್ಗೆ 6.45ಕ್ಕೆ ಬಿಟ್ಟು ಬೀರೂರನ್ನು 9.40ಕ್ಕೆ ತಲುಪುವಂತೆ ಬದಲಾವಣೆ ಮಾಡಿದಲ್ಲಿ, ತಾಳಗೊಪ್ಪ, ಶಿರಸಿ, ಸಿದ್ದಾಪುರ, ಸಾಗರ, ಶಿಕಾರಿಪುರ ಹಾಗೂ ಶಿವಮೊಗ್ಗದ ಪ್ರಯಾಣಿಕರಿಗೆ ಬೀರೂರಿನಿಂದ ಬೆಂಗಳೂರಿಗೆ ಸಿದ್ದಗಂಗಾ ರೈಲಿನ ಸಂಪರ್ಕ (ಕನೆಕ್ಷನ್) ಹಾಗೂ ಬೆಂಗಳೂರು-ಮುಂಬೈ (ದಾದರ್ ಎಕ್ಸ್ಪ್ರೆಸ್) ರೈಲಿನ ಸಂಪರ್ಕವು ಏಕಕಾಲದಲ್ಲಿ ಲಭ್ಯವಾಗುತ್ತದೆ. ಈ ಬದಲಾವಣೆಯಿಂದ ಶಿವಮೊಗ್ಗದಿಂದ ಒಂದು ಹೆಚ್ಚುವರಿ ಕನೆಕ್ಟಿಂಗ್ ರೈಲು ಲಭ್ಯವಾಗುತ್ತದೆ. ಇದು ಸಾಧ್ಯವಾಗದಿದ್ದಲ್ಲಿ;
6) ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳೆಗ್ಗೆ 8.30 ಅಥವಾ 9.00 ಗಂಟೆಗೆ ಒಂದು ಹೊಸ ರೈಲನ್ನು ಕಲ್ಪಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರಾದ ಡಾ. ಎ ಸತೀಶ್ ಕುಮಾರ್ ಶೆಟ್ಟಿ, ನಾಗರಾಜ್ ಗೋರೆ, ಜನ್ಮೇಜಿರಾವ್, ವೆಂಕಟರಮಣ, ಸೀತಾರಾಮ್, ರಘುಪತಿ, ಸುಬ್ಬಣ್ಣ, ಶ್ರೀಪಾದ್ ಭಟ್, ಶಿವರಾಮಗೌಡ, ಪ್ರಕಾಶ್, ಅಶೋಕ್ ಕುಮಾರ್, ಚನ್ನವೀರಪ್ಪ ಗಾಮನಗಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *