ರೈತರೊಂದಿಗೆ ನಮ್ಮ ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆ…. ಮಾದರಿಯಾದ ಸಂಘಟನೆಯ ಕೃಷಿ ಚಟುವಟಿಕೆ….
ಭತ್ತ ಬೆಳೆಯುವಂತದ್ದು ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲೊಂದು ದಿನಗಳು ಸಾಗುತ್ತಾ ಬಂದಂತೆ ಭತ್ತ ನಾಟಿ ಮಾಡಿ ಪೈರು ಕೈಗೆ ಸಿಗುವ ಹೊತ್ತಿಗೆ ಫಸಲಿಗಿಂತ ಅತಿಯಾದ ನಿರ್ವಹಣಾ ವೆಚ್ಚದಿಂದ ಬೇಸತ್ತ ಅನೇಕ ರೈತರು ವಾಣಿಜ್ಯ ಬೆಳೆಗಳಿಗೆ ಮೊರೆ ಹೋದರು ಇನ್ನು ಪಟ್ಟಣಕ್ಕೆ ಸಮೀಪವಿದ್ದ ಗದ್ದೆಗಳೆಲ್ಲ ಲೇಔಟ್ ಗಳಾಗಿ ಪರಿವರ್ತನೆಯಾಗಿದೆ. ಇವೆಲ್ಲದರ ನಡುವೆ ಕೆಲವರು ತಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆಯನ್ನ ಕಷ್ಟವಾದರೂ ಅತ್ಯಂತ ಪ್ರೀತಿಯಿಂದ ಮುಂದುವರೆಸಿಕೊಂಡು ಬರುತ್ತಿದ್ದಾರೆ ಅದರಲ್ಲೆ ನೆಮ್ಮದಿಯನ್ನ ಕಂಡುಕೊಳ್ಳುತ್ತಿದ್ದಾರೆ. ವೇಗವಾಗಿ ಅಭಿವೃದ್ದಿಯಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದುಕೊಳ್ಳುತ್ತಿರುವ ನಾವೆಲ್ಲಾ ಕೃಷಿಯಿಂದ ದೂರವಾಗುತ್ತಿದ್ದೇವೆ ಭೂಮಿ ತಾಯಿಯ ಮಡಿಲಲ್ಲಿ ಸೆರೆಯಾಗಿ ಬದುಕು ಕಟ್ಟಿಕೊಳ್ಳುವ ಕಾಯಕದಿಂದ ಹಿಂದೆ ಸರಿದಿದ್ದೇವೆ. ಕೃಷಿ ಚಟುವಟಿಕೆಗಳಲ್ಲಿ ಯುವಕರು ಪಾಲ್ಗೊಳ್ಳುವುದು ಮತ್ತು ಸಂಕಷ್ಟದಲ್ಲೂ ಸಾಂಪ್ರದಾಯಿಕ ಕೃಷಿಯನ್ನ ಪ್ರೀತಿಯಿಂದ ಮಾಡುತ್ತಿರುವವರ ಬೆಂಬಲಕ್ಕೆ ನಿಲ್ಲುವ ಉದ್ದೇಶದಿಂದ ನಮ್ಮ ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆ ಅಂತಹ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನ ನಡೆಸಿ ಅರಿವು ಮೂಡಿಸುವ ಮತ್ತು ಅಂತಹ ಕೃಷಿ ಕುಟುಂಬಗಳ ಬೆನ್ನಿಗೆ ನಿಲ್ಲುವ ಕಾಯಕವನ್ನ ಪ್ರಾರಂಭಿಸಿದೆ ಇದರ ಶುರುವಾತು ಎನ್ನುವಂತೆ ಮಕ್ಕಿಮನೆ ಸಮೀಪದ ಕೆಳ ಅಂಕಣ ಎಂಬ ಊರಿನ ವಿನೋದಮ್ಮ ಅವರ ಜಮೀನಿನಲ್ಲಿ ನಿನ್ನೆ ದಿನ ಸಂಘಟನೆಯ ಸದಸ್ಯರೆಲ್ಲ ಸೇರಿ ನಾಟಿ ಮಾಡುವ ಮೂಲಕ ಮುನ್ನುಡಿ ಬರೆದಿದ್ದೇವೆ.
ವಿನೋದಮ್ಮ ಮತ್ತು ಅವರ ಮಗಳು ಇಬ್ಬರೆ ಇರುವಂತ ಒಂದು ಸಾಮಾನ್ಯ ಕುಟುಂಬ ಅವರ ಪಾಲಿಗೆ ಬಂದಂತ ಒಂದು ಎಕರೆ ಜಮೀನು ಸಂಕಷ್ಟದಲ್ಲಿದ್ದರೂ ಪ್ರೀತಿಯಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದವರು. ಅಲ್ಲಿನ ನಮ್ಮ ಸಂಘಟನೆಯ ಸ್ನೇಹಿತರಿಂದ ಬಂದಂತಹ ಮಾಹಿತಿಯನ್ನಾಧರಿಸಿ ಅವರನ್ನ ಸಂಪರ್ಕಿಸಿ ನಮ್ಮ ಉದ್ದೇಶವನ್ನ ಮನದಟ್ಟು ಮಾಡಿದಾಗ ಅತ್ಯಂತ ಸಂತೋಷದಿಂದ ಒಪ್ಪಿ ನಮಗೆ ಅವಕಾಶ ಕಲ್ಪಿಸಿಕೊಟ್ಟರು ಮನೆ ಮಕ್ಕಳಂತೆ ನಮ್ಮನ್ನ ಪ್ರೀತಿಯಿಂದ ನಡೆಸಿಕೊಂಡು ಅಂತಿಮವಾಗಿ ನಾವೆಲ್ಲ ಅಲ್ಲಿಂದ ತೆರಳುವಾಗ ಸಂತೋಷದಿಂದ ಕೃತಜ್ಞತೆ ಸಲ್ಲಿಸುತ್ತಾ ಈ ಬಾರಿ ಪ್ರತಿ ವರ್ಷದಂತೆ ನಮಗೆ ಹೊರೆಯಾಗಿಲ್ಲ ನಿಮ್ಮ ಸಹಾಯವನ್ನ ಮರೆಯೊಲ್ಲ ಮತ್ತೆ ಬನ್ನಿ ಎನ್ನುವ ಅವರ ಆತ್ಮಿಯತೆ ನಮ್ಮ ಕೆಲಸದ ಸಾರ್ಥಕತೆಯನ್ನ ಅರಿವು ಮಾಡಿಸುತ್ತಿತ್ತು.
ನಾವೇನೋ ಅಸಾಧ್ಯವಾದದ್ದು ಮಾಡಿದ್ದೇವೆ ಅನ್ನುವುದಲ್ಲ ಯುವಕರಿಗೆ ಒಂದಷ್ಟು ಪ್ರೇರಣೆಯಾಗಲಿ ಭೂಮಿ ತಾಯಿಯ ಒಡಲಲ್ಲಿ ಮತ್ತೆ ಬೆಸೆವುವಂತಾಲಿ ಸಾಂಪ್ರದಾಯಿಕ ಕೃಷಿ ಜೀವಂತವಾಗಿರಲಿ ಅನ್ನುವುದೇ ನಮ್ಮ ಉದ್ದೇಶ. ನಮ್ಮ ಕಾರ್ಯಕ್ಕೆ ಜೊತೆಯಾದ ಎಲ್ಲಾ ಸ್ನೇಹಿತರಿಗೂ ತುಂಬು ಹೃದಯದ ಧನ್ಯವಾಗಳನ್ನ ಅರ್ಪಿಸುತ್ತಿದ್ದೇನೆ. ದಬ್ಬಣಗದ್ದೆ ಸಮೀಪ ಮುಂದಿನ ಭಾನುವಾರ ಮತ್ತೊಂದು ಜಮೀನಿನಲ್ಲಿ ನಮ್ಮ ಈ ಕಾರ್ಯವನ್ನ ಮುಂದುವರೆಸಲಿದ್ದೇವೆ ಭಾಗಿಯಾಗುವವರಿದ್ದರೆ ನಮ್ಮ ಜೊತೆಯಾಗಿ, ಈ ಕಾರ್ಯದಲ್ಲಿ ನಮ್ಮ ಸಂಘಟನೆಯ ರಾಜ್ಯ ಸಂಚಾಲಕರಾದ ನಿಕೇತ್ ರಾಜ್ ಮೌರ್ಯ, ತಾಲ್ಲೂಕು ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ, ಹಕೀಂ ಹೆದ್ದೂರು, ಸುಭಾಷ್ ಕುಲಾಲ್ , ಮಾರ್ಗದರ್ಶಕರಾದ ಆದರ್ಶ್ ಹುಂಚದಕಟ್ಟೆ, ಅಮ್ರಪಾಲಿ ಸುರೇಶಣ್ಣ, ಅಮರನಾಥ್ ಶೆಟ್ಟಿ ಹಾಗೂ ದೇಶಕ್ಕಾಗಿ ನಾವು ಸಂಘಟನೆಯ ಅನೇಕ ಸತ್ಯಗ್ರಹಿಗಳು ಜೊತೆಯಾಗಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153