ವಿಜೃಂಭಣೆ ದಸರಾ ನಡೆಸಲು ಮಹಾನಗರ ಪಾಲಿಕೆ ನಿರ್ಧರಿಸಿದ್ದು ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಯುಕ್ತರ ಕವಿತಾ ಯೋಗಪ್ಪನವರು ನೇತೃತ್ವದಲ್ಲಿ 9 ದಿನಗಳು ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಯಶಸ್ವಿಗೆ ಶಿವಮೊಗ್ಗದ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.
ಹಲವು ದಸರ ಕಾರ್ಯಕ್ರಮ ನಡೆದಿದೆ. ನಾಳೆ ಕೋಟೆ ಚಂಡಿಕಾಪರಮೇಶ್ವರಿ ದೇವಾಲಯದಲ್ಲಿ ದಸರಾ9 ದಿನಗಳ ನಡೆಯಲಿದೆ. 14 ತರ ಉತ್ಸವ ಸಮಿತಿ ಇದೆ. 68 ಚಟುವಟಿಕೆ ನಡೆಯಲಿದೆ. ಅಲ್ಲಮ ಪ್ರಭು ಮೈದಾನದಲ್ಲಿ ಬನ್ನಿ ಕಡೆಯಲಾಗುವುದು ಎಂದರು.
ವಿವಿಧ ರೀತಿಯ ಪರಿಸರ, ಸಾಂಸ್ಕೃತಿಕ, ಚಲನ ಚಿತ್ರೀತ್ಸವ ಕಾರ್ಯಕ್ರಮವನ್ನ ಕನ್ನಡ ಮತ್ತು ಸಾಂಸ್ಕೃತಿಕ ದಸರಾ ನಡೆದಿದೆ. ಮೂರು ದಸರಾ ಚಟುವಟಿಕೆ ನಡೆದಿದೆ. ಪೌರಕಾರ್ಮಿಕ, ಪತ್ರಿಕಾ ದಸರಾ, 54 ಸಾವಿರ ಕಲಾವಿಧರು ಪಾಲ್ಗೊಳ್ಳುತ್ತಿದ್ದಾರೆ. ಇಂದು ಮಕ್ಕಳ ದಸರಾದಲ್ಲಿ 24 ಸಾವಿರ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.
ಪಾಲಿಕೆ ಬಜೆಟ್‌ನಲ್ಲಿ 1.5 ಕೋಟಿ ಹಣ ತೆಗೆದಿಡಲಾಗಿದೆ. ಖರ್ಚು 2.35 ಕೋಟಿ ಕರ್ಚಾಗುತ್ತಿದೆ ಎಂದರು.
ನಾಳೆ ಕಾರ್ಯಕ್ರಮವನ್ನ ಕನ್ನಡ ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಉದ್ಘಾಟಿಸಲಿದ್ದಾರೆ. ಅ.07 ಕ್ಕೆ ನಟಿ ಭವ್ಯರವರು ಭಾಗಿಯಾಗಲಿದ್ದಾರೆ. ಸಾಗರ ಬಾಲಣ್ಣ, ಬಹದ್ದೂರು ಮೂರು ಆನೆಗಳು ಪಾಲ್ಗೊಳ್ಳಲಿದ್ದಾರೆ. ಸಾಗರದ ಆನೆ ಅಂಬಾರಿಹೋರಲಿದೆ. ನಾಳೆ ಆನೆ ಶಿವಮೊಗ್ಗಕ್ಕೆ ಬರಲಿದೆ ಎಂದರು. ಸಂದರ್ಭದಲ್ಲಿ ಪಾಲಿಕೆ ಆಯುಕ್ತರು ಡಿ ಎಸ್ ಅರುಣ್ ಮುಂತಾದವರು ಉಪಸ್ಥರಿದ್ದರು.