ನಾಟಕದ ಯಶಸ್ಸು ಚಪ್ಪಾಳೆಯಿಂದ ಸಿಗುವಂತದ್ದಲ್ಲ. ಎರಡು ಕೈ ಚಪ್ಪಾಳೆ ಗಳ ನಡುವೆ ಇರುವ ನಿಶ್ಯಬ್ದದಿಂದ ಸಾದ್ಯ.ಇದಕ್ಕೆ ನಿರಂತರ ರಂಗ ಪ್ರದರ್ಶನ ಮೂಲಕ ಕಂಡುಕೊಳ್ಳಬಹುದೆಂದು ಹಿರಿಯ ನಾಟಕಕಾರ. ಚಿಂತಕರು.ಹಾಗು ರಂಗಭೂಮಿ ಮತ್ತು ಕಿರುತೆರೆ. ಹಿರಿತೆರೆ ನಿರ್ದೇಶಕರಾದ . ಟಿ.ಎನ್ ಸೀತಾರಾಮ್ ಇವರು ತಿಳಿಸಿದ್ದಾರೆ.

ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗು ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಸಹಯೋಗ ದಲ್ಲಿ ಹಮ್ಮಿಕೊಂಡ 5 ದಿನಗಳ ರಾಜ್ಯ ಮಟ್ಟದ ನಾಟಕ ರಚನಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಮುರಿದು ಹೊಸತನ್ನು ಕಟ್ಟುವ ಪ್ರಕ್ರೀಯೆ ರಂಗಭೂಮಿಯ ಜೀವಂತಿಕೆಯ ಸಂಖೇತ. ಈ ಹೊತ್ತಿಗೆ ಹೊಸನಾಟಕಗಳ ರಚನೆ ಅಗತ್ಯ ವಿದೆ ಎಂದು ಇದೇ ಸಮಯದಲ್ಲಿ ಪ್ರತಿಪಾದಿಸಿದರು. ನಂತರ ಹೆರಾಂತ ನಾಟಕಕಾರ. ಶಿಬಿರದ ನಿರ್ದೇಶಕರೂ ಆದ ಕೆ. ವೈ ನಾರಾಯಣ ಸ್ವಾಮಿ ಮಾತನಾಡಿ. ರಂಗಭೂಮಿ ಯಲ್ಲಿ ನಾವು ಅನೇಕ ಚರ್ಚೆಗಳ ಮೂಲಕ ಹೊಸತನ್ನು ಕಲಿಯುತ್ತೇವೆ.ಇದು ಒಂದು ರೀತಿಯ ಮುಕ್ತವಿಶ್ವವಿದ್ಯಾಲಯ ಇದ್ದಂತೆ ಎಂದರು. ಅಕಾಡೆಮಿ ಅಧ್ಯಕ್ಷರಾದ ನಾಗರಾಜ ಮೂರ್ತಿ ಅವರು ಮಾತನಾಡುತ್ತಾ. ಇಂದು ಹೊಸ ನಾಟಕಗಳ ಕೊರತೆ ಇದೆ. ಇದನ್ನು ನೀಗಿಸುವ ನಿಟ್ಟಿನಲ್ಲಿ ಅಕಾಡೆಮಿ ಇಂಥಹ ಶಿಬಿರಗಳನ್ನು ನಡೆಸುತ್ತಿದೆ. ಯುವಜನತೆಗೆ ಸ್ಪೂರ್ತಿ ಯಾಗುತ್ತಿದೆ ಎಂದರು.

ಕುವೆಂಪು ಪ್ರತಿಷ್ಠಾನ ದ ಕಾರ್ಯದರ್ಶಿ ಗಳಾದ ಕಡಿದಾಳ್ ಪ್ರಕಾಶ ಅವರು ಈ ಶಿಬಿರದ ಮೂಲಕ ಹೊಸ ನಾಟಕಗಳು ರಂಗಭೂಮಿಗೆ ಬರಲಿ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ಶಶಿಧರ್ ಭಾರಿಘಾಟ್. ಇದ್ದರು. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 30 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಕಾಡಮಿ ರಿಜಿಸ್ಟರ್ ಆದ ಶ್ರೀಮತಿ ನಿರ್ಮಲ ಮಠಪತಿ ಅವರು ಸ್ವಾಗತಿಸಿದರೆ. ಅಕಾಡಮಿ ಜಿಲ್ಲಾ ಸಂಚಾಲಕ ಡಾ.ಗಣೇಶ್ ಕೆಂಚನಾಲ್ ವಂದಿಸಿದರು. ಶಿಬಿರ ಸಂಚಾಲಕರಾದ ರವೀಂದ್ರನಾಥ್ ಸಿರಿವರ ಅವರು ನಿರೂಪಿಸಿದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *