ಶಿವಮೊಗ್ಗ ರೈತ ದಸರಾ ಜಾತವನ್ನು ನಗರ ಶಾಸಕ ಚನ್ನಬಸಪ್ಪ ಉದ್ಘಾಟಿಸಿದರು.ಮಹೋತ್ಸವ ಅಂಗವಾಗಿ ನಗರದಲ್ಲಿ ಸಡಗರ, ಸಂಭ್ರಮದಿಂದ ರೈತ ದಸರಾ ನಡೆದಿದೆ. ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ನಗರದ ಸೈನ್ಸ್ ಫಿಲ್ಡ್ ನಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ರೈತರು ಆಗಮಿಸಿದ್ದಾರೆ.

ಮೆರವಣಿಗೆಯಲ್ಲಿ ಮೇಳಸಿದ ಹಸಿರು. ಸುತ್ತಮುತ್ತಲಿನ ನೂರಾರು ರೈತರು, ರೈತ ದಸರಾ ಕಾರ್ಯಕ್ರಮದಲ್ಲಿ ಭಾಗಿದ್ದರು.ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಭಾಗಿಯಾಗಿ,ಎತ್ತಿನ ಗಾಡಿಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ಕುವೆಂಪು ರಂಗಮಂದಿರ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.

ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಮಾತನಾಡಿ, ದಸರಾದಲ್ಲಿ ಪ್ರತಿವರ್ಷ ರೈತರ ದಸರಾ ನಡೆಸಲಾಗುತ್ತಿದೆ. ಶಿವಮೊಗ್ಗದಲ್ಲಿ ಮಾತ್ರ ರೈತರು ಎತ್ತಿನಗಾಡಿ, ಟ್ರಿಲ್ಲರ್ ನಲ್ಲಿ ಬರುವುದು ವಿಶೇಷವಾಗಿದೆ. ಒಕ್ಕಲುತನವೆಂಬುದು ಒಂದು ಸಂಸ್ಕೃತಿಯಾಗಿದೆ. ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡತನವಿತ್ತು. ವಾರದಲ್ಲಿ ಸೋಮವಾರ ಉಪವಾಸಕ್ಕೆ ಕರೆ ನೀಡಲಾಗಿತ್ತು. ಜೈಜವಾನ್ ಜೈಕಿಸಾನ್ ಎಂಬ ಘೋಷಣೆ ಮಾಡಿದವರು ಶಾಸ್ತ್ರಿಗಳು. ದೇಶ ಕಾಯುವನು ಸೈನಿಕನು ಹೇಗೋ ದೇಶಕ್ಕೆ ರೈತ ಆರ್ಥಿಕ ಬೆನ್ನಲುಬು ಎಂಬುದು ಅದರ್ಥ ಎಂದರು‌.

ಶಾಸಕ ಚೆನ್ನಬಸಪ್ಪ ಮಾತನಾಡಿ, ಗ್ರಾಮೀಣ ಭಾರತ ಮತ್ತು ಸಂಸ್ಕೃತಿಯನ್ನ ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವವನು ರೈತನೊಬ್ಬನು. ರೈತರಿಗೆ ಬೆಳೆದ ಬೆಳೆಗೆ ಮಾರುಕಟ್ಟೆ ದರ ನಿಗದಿಪಡಿಸುವಂತಾಗಬೇಕು. ರೈತನ ಹೆಸರಿನಲ್ಲಿ ದೇಶವನ್ನ ಕಟ್ಟಲಾಗಿದೆ. ಇಂದು ಗೊಬ್ಬರ ಸಿಗದಂತಹ, ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಷವಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕೃಷಿ ಹೇಗಿರಬೇಕು ಎಂಬುದು ಇದೆ. ಅದನ್ನ ಬೆಳೆಯಬೇಕಿದೆ. ಇದೆ ಮುಂದುವರೆದರೆ ಆಹಾರಕ್ಕೂ ಕಷ್ಟವಾಗಲಿದೆ. ರೈತರು ಈ ಬಗ್ಗೆ ಯೋಚಿಸಬೇಕಿದೆ ಎಂದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *