2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ) ದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅ. 09 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಅರ್ಜಿ ನಮೂನೆಯನ್ನು ಎನ್.ಹೆಚ್.ಎಂ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣ, ಬಿ.ಹೆಚ್. ರಸ್ತೆ, ಶಿವಮೊಗ್ಗ ಇಲ್ಲಿ ವಿತರಿಸಲಾಗುವುದು. ಹಾಗೂ ಅದೇ ದಿನ ಎಲ್ಲಾ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಸಂಜೆ 5.30 ರವರೆಗೆ ನಡೆಸಲಾಗುವುದು.
ವೈದ್ಯರು, ಸಿಹೆಚ್, ಐಸಿಯು- ಹೆಚ್‌ಡಿಯು, ಎಮ್‌ಹೆಚ್, ಐಸಿಯು- ಹೆಚ್‌ಡಿಯು, ಎನ್‌ಆರ್‌ಸಿ ವಿಭಾಗಕ್ಕೆ 28 ಹುದ್ದೆಗಳು, ವಿದ್ಯಾರ್ಹತೆ- ಎಂ.ಬಿ.ಬಿಎಸ್, ಐಸಿಯು ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿ ಯ ನೋಂದಣಿಯನ್ನು ಹೊಂದಿರತಕ್ಕದ್ದು.
ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಎನ್‌ಪಿಪಿಸಿಡಿ ವಿಭಾಗ 01 ಹುದ್ದೆ, ವಿದ್ಯಾರ್ಹತೆ ಒಂದು ವರ್ಷದ ಡಿಪ್ಲೋಮಾ ಇನ್ ಹಿಯರಿಂಗ್ ಲ್ಯಾಂಗ್ವೇಜ್ ಹೊಂದಿರುವ ತಾಂತ್ರಿಕ ವ್ಯಕ್ತಿ (ಡಿ.ಹೆಚ್.ಎಲ್.ಎಸ್) ಮತ್ತು ಆರ್.ಸಿ.ಐ ಸಂಸ್ಥೆಯಿAದ ಮಾನ್ಯತೆ ಪಡೆದಿರುವ ಪ್ರಮಾಣ ಪತ್ರ.
ಎನ್‌ಪಿಪಿಸಿಡಿ ವಿಭಾಗಕ್ಕೆ ಶ್ರವಣದೋಷವುಳ್ಳ ಮಕ್ಕಳ ಬೋಧಕರು, 01 ಹುದ್ದೆ, ವಿದ್ಯಾರ್ಹತೆ ಯುವ ಕಿವುಡ ಮತ್ತು ಶ್ರವಣ ನ್ಯೂನತೆಯ ತರಬೇತಿಯಲ್ಲಿ ಡಿಪ್ಲೋಮಾ (ಡಿ.ಟಿ.ವೈ.ಹೆಚ್.ಹೆಚ್) ಹೊಂದಿರುವುದು ಹಾಗೂ ಆರ್.ಸಿ.ಐ ಸಂಸ್ಥೆಯಿAದ ಮಾನ್ಯತೆ ಪಡೆದಿರುವ ಪ್ರಮಾಣ ಪತ್ರ.
ಡಿಇಐಸಿ ವಿಭಾಗ ಕ್ಕೆ ಡಿಇಐಸಿ ಮ್ಯಾನೇಜರ್, 01 ಹುದ್ದೆ, ವಿದ್ಯಾರ್ಹತೆ -ಎಂಡಿಆರ್‌ಎ, ಆರ್‌ಸಿಐ ಅಥವಾ ಸ್ನಾತಕೋತ್ತರ ಪಧವಿ, ಡಿಪ್ಲೋಮಾ ಇನ್ ಹಾಸ್ಪಿಟಲ್, ಹೆಲ್ತ್ ಮ್ಯಾನೇಜ್ ಮೆಂಟ್ ಅಥವಾ ಎಮ್‌ಬಿಎ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಆಗಿರಬೇಕು.
ಎನ್.ಹೆಚ್.ಎಂ ಮಾರ್ಗಸೂಚಿಯಂತೆ ನೇಮಕಾತಿಯು ಮೇರಿಟ್ ಕಂ ರೋಸ್ಟ್ರ್ ಆಧಾರದ ಮೇಲೆ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಸಂಬAಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಹಾಗೂ ಖಾಯಂ ವಿಳಾಸ ಸ್ವವಿವರದೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08182-200337 ಸಂಪರ್ಕಿಸಬಹುದು ಹಾಗೂ ಪ್ರತಿ ತಿಂಗಳ 3ನೇ ಸೋಮವಾರದಂದು (ಸಾರ್ವಜನಿಕ ರಜೆ ಇದ್ದಲ್ಲಿ ನಂತರದ ದಿನದಲ್ಲಿ) ವೈದ್ಯರ ಹುದ್ದೆಗಳು ಭರ್ತಿ ಆಗುವವರೆಗು ನೇರ ಸಂದರ್ಶನ ನಡೆಸಲಾಗುವುದು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಸಂಘದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದಾರೆ.